ಉಜ್ಜಿನಿ ಬೀರಲಿಂಗೇಶ್ವರ ಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ,ಸಾಸಲು ಹೋಬಳಿ ಉಜ್ಜಿನಿ ಗ್ರಾಮದಲ್ಲಿ ಶ್ರೀ ಉಜ್ಜಿನಿ ಬೀರಲಿಂಗೇಶ್ವರ ಸ್ವಾಮಿಯ ದೇವಾಲಯ ಲೋಕಾರ್ಪಣೆ ಗೊಂಡು ನಲವತ್ತು ದಿನ ಮಂಡಲ ಪೂಜಾ ಕಾರ್ಯಕ್ರಮ ಮಾಡಲಾಯಿತು.

ಅನಾದಿಕಾಲ ದಿಂದಲು ನಮ್ಮ ಪೂರ್ವಜರು ಆಚರಣೆ ಮಾಡಿಕೊಂಡು ಬರುವಂತೆ ಶ್ರೀ ಉಜ್ಜಿನಿ ಬೀರಲಿಂಗೇಶ್ವರ ದೇವಾಲಯ ಸುಮಾರು ಆರುನೂರು ರಿಂದ ಏಳು ನೂರು ವರ್ಷದ ಇತಿಹಾಸವಿದ್ದು ಇಲ್ಲಿನ ಕಾಡಿನಲ್ಲಿ ವ್ಯಾಪಾರಸ್ಥರು ಬಂದು ಮರದ ಕೆಳಗೆ ವಿಶ್ರಾಂತಿ ಪಡೆದು ಇಲ್ಲಿ ಕಲ್ಲುಗಳು ಇಟ್ಟು ಅಡುಗೆ ಮಾಡುವ ಸಮಯದಲ್ಲಿ ಅವರಿಗೆ ವಿಚಿತ್ರವಾದ ಅನುಭವವಾದ ನಂತರ ಅದರಲ್ಲಿ ಒಂದು ಶಿವಲಿಂಗ ಇರುವು ಗೊತ್ತಾಗಿ ಅಂದಿನಿಂದ ಅಲ್ಲಿ ಶಿವಲಿಂಗ ವೆಂದು ನಂಬಿಕೆಯಿಂದ ಪೂಜಾ ಕೈಂಕಾರ್ಯಗಳು ಮಾಡುತ್ತಾ ಬಂದಿದ್ದು ಚೋಳರ ಕಾಲದ ಮಾಂಡಲಿಕರಿಗೆ ದೇವಾಲಯ ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆವಿಗೂ ದೇವಾಲಯದ ಎಲ್ಲಾ ಜವಬ್ದಾರಿಯನ್ನು ಕುರುಬ ಜನಾಂಗದವರು ಕುಲದೇವರು ಎಂದು ದೇವತಾಕಾರ್ಯಗಳನ್ನು ನೆಡೆಸಿಕೂಂಡು ಬರುತ್ತಿದ್ದು ನೂತನವಾಗಿ ದೇವಾಲಯ ನಿರ್ಮಾಣ ಮಾಡಿ ಮೇ 20ರಂದು ಲೋಕಾರ್ಪಣೆ ಮಾಡಲಾಗಿ ಮತ್ತೆ 48ನೇ ದಿನದ ಮಂಡಲ ಪೂಜಾ ಕೈಂ ಕಾರ್ಯಗಳು ಮಾಡಲಾಗಿದೆ ಎಂದು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ತಿಳಿಸಿದರು.
ಚೋಳರ ರಾಜರ ಆಸ್ಥಾನದಲ್ಲಿ ಮಾಂಡಲಿಕನಾಗಿ ಕೆಲಸ ಮಾಡುತ್ತಿರುವವರು ಈ ಕಾಡಿನಲ್ಲಿ ವಾಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಶಿವಲಿಂಗದ ಮಹಿಮೆ ಅರಿತು ದೊಡ್ಡ ದೊಡ್ಡ ಬಂಡೆಗಳಿಂದ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಚೋಳ ಆಳ್ವಿಕೆಯಲ್ಲಿ ದಾರ್ಮಿಕ ಸಂಸ್ಕೃತಿಯಂತೆ ದೇವಾಲಯ ನಿರ್ಮಿಸಲಾಗಿದ್ದು ಶಿಥಿಲಾವಸ್ಥೆಯಲ್ಲಿ ಇದ್ದಂತಹ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಿ ಮೇ ತಿಂಗಳಲ್ಲಿ ಲೋಕಾರ್ಪಣೆ ಗೋಳಿಸಲಾಗಿದ್ದು ಅದರಂತೆ 48ದಿನಗಳ ಪೂಜೆಯ ನಂತರ ಸಮಾಪ್ತಿ ಗೊಳಿಸಿ ಸಾರ್ವಜನಿಕರಿಗೂ ಪೂಜಾ ವ್ಯವಸ್ಥೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವ ಅದ್ಯಕ್ಷ ಜಿ ಸಿದ್ದಗಂಗಯ್ಯ
ಅರ್ ಚಂದ್ರು ಕಾರ್ಯಧ್ಯಕ್ಷರು ರೇವಣಸಿದ್ದಪ್ಪ ಉಪಾಧ್ಯಕ್ಷರು ಲಕ್ಷ್ಮಯ್ಯ ಕಾರ್ಯದರ್ಶಿ ಕೆ ಎಸ್ ಅಶ್ವಥ್ ಖಜಾಂಚಿ ಧರ್ಮದರ್ಶಿಗಳು ಟಿ ಎಂ ಮುನಿಕೃಷ್ಣಪ್ಪ. ಎಸ್ ಮುನಿರಾಜಯ್ಯ ಮುನಿಕೃಷ್ಣ . ಅರ್ ಉಮೇಶ ಸಿದ್ದಗಂಗಯ್ಯ. ವಿ ವಿ. ಕೆಂಪರಾಜ್ ಎಂ. ಲಕ್ಷ್ಮಯ್ಯ ಜವರಯ್ಯ ಸಿ. ರಾಜಣ್ಮ ದೇವರ ಕುಲಬಾಂದವರು ಅಣ್ಣ-ತಮ್ಮಂದಿರು ಸಾರ್ವಜನಿಕರು ಹಾಜರಿದ್ದರು.