ಮುರಿದ ಮರ ತೆರವುಗೊಳಿಸದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ
ದೊಡ್ಡಬಳ್ಳಾಪುರ :ಶಾಲೆಯ ಮುಂಭಾಗದ ಮರ ಮುರಿದು ಬಿದ್ದು 24 ಗಂಟೆಗಳಾದರೂ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ತಾಲೂಕಿನ ಓಬದೇನಹಳ್ಳಿ ಸರ್ಕಾರಿ ಶಾಲೆಯ ಗೇಟ್ ಮುಂಭಾಗದ ಮರ ದುಸ್ಥಿತಿಯಲ್ಲಿದ್ದು, ಸುಮಾರು 2 ತಿಂಗಳ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರು ಪಂಚಾಯತಿ ಗಮನಕ್ಕೆ ತಂದಿದ್ದಾರೆ. ಆದರೆ, ಪಂಚಾಯತಿ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಲೆಯ ಮುಂಭಾದಲ್ಲಿದ್ದ ಮರ ಬಿದ್ದು ಹೋಗಿದೆ. ಬಿದ್ದಿರುವ ಮರ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು ಇನ್ನು ತೆರವು ಮಾಡಿಲ್ಲ. ಇಂದು ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಆಗುವ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ತೆರವು ಮಾಡಿಕೊಡಬೇಕು ಎಂದು ಜನಧ್ವನಿ ವೇದಿಕೆಯ ಮುಖಂಡರಾದ ಕಾನೂನು ವಿಧ್ಯಾರ್ಥಿ ರಾಜೇಂದ್ರ ಮತ್ತು ಅನ್ರಾಲ್ಡ್ ಮುನಿರಾಜ್ ರವರು ಪಂಚಾಯತಿ ಮುಖ್ಯಾಧಿಕಾರಿಗಳನ್ನು ಅಗ್ರಹಿಸಿದ್ದಾರೆ.