ದಾಯಾದಿಗಳ ಕಲಹ 300ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶ

ದೊಡ್ಡಬಳ್ಳಾಪುರ: ನಾಟಿ ಮಾಡಿದ ವಾರಕ್ಕೆ 300ಕ್ಕೂ ಆಡಿಕೆ ಗಿಡಗಳನ್ನ ನಾಶ ಮಾಡಲಾಗಿದೆ, ಜಮೀನು ಕಸಿದುಕೊಳ್ಳಲು ಸಂಚು ನಡೆಸಿದ ದಾಯಾದಿಗಳು, ಆಡಿಕೆ ಗಿಡಗಳನ್ನ ಕಿತ್ತಾಕಿ ಕೃತ್ಯ ಎಸಗಿದ್ದಾರೆ. ದಾಯಾದಿಗಳ ಕೃತ್ಯಕ್ಕೆ ಸಂಘಟನೆ ಮುಖಂಡರೊಬ್ಬರು ಶಾಮೀಲಾಗಿರುವ ಆರೋಪ ಸಹ ಕೇಳಿ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಮುಕ್ಕಡಿಘಟ್ಟ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ತಡೆದಿದ್ದು, ಪಕ್ಕದ ಗ್ರಾಮದ ತಿಪ್ಪಕ್ಕ ಎಂಬುವರಿಗೆ ಸೇರಿದ 300ಕ್ಕೂ ಹೆಚ್ಚು ಆಡಿಕೆ ಗಿಡಗಳನ್ನ ಕಿಡಿಗೇಡಿಗಳು ಕಿತ್ತು ನಾಶ ಮಾಡಿದ್ದಾರೆ , ಗ್ರಾಮದ ಸರ್ವೆ ನಂಬರ್ 52ರಲ್ಲಿ ವಾರದ ಹಿಂದೆಯಷ್ಟೇ ಹಾಕಲಾಗಿದ್ದ ಆಡಿಕೆ ಗಿಡಗಳು ಅವು, ಅವುಗಳಲ್ಲಿ ಮೂರು ಗಿಡಗಳನ್ನ ಮಾತ್ರ ಬಿಟ್ಟು ಉಳಿದೆಲ್ಲ ಆಡಿಕೆ ಗಿಡಗಳನ್ನ ನಾಶ ಮಾಡಿದ್ದಾರೆ.

ಮುಕ್ಕಡಿಘಟ್ಟ ಗ್ರಾಮದ ಪಕ್ಕದ ಗ್ರಾಮವಾದ ಬಿಕ್ಕಲಹಳ್ಳಿಯಲ್ಲಿ ತಿಪ್ಪಕ್ಕ ಕುಟುಂಬದವರು ವಾಸವಾಗಿದ್ದು, ಕಳೆದ 50 ವರ್ಷಗಳಿಂದ. ಮುಕ್ಕಡಿಘಟ್ಟದ ಸರ್ವೆ ನಂಬರ್ 52ರ 3 ಎಕರೆ ಜಮೀನಿನಲ್ಲಿ. ಅನುಭೋಗದಲ್ಲಿದ್ದಾರೆ, ಜಮೀನಿನ ಸರ್ವೆ ಸ್ಕೆಚ್ ಆಗಿದೆ, ಜಮೀನು ಪಕ್ಕದಲ್ಲಿ ಅರಣ್ಯ ಇದ್ದು ಕಾಡುಪ್ರಾಣಿಗಳ ಹಾವಳಿ ಇದೆ, ಚಿರತೆ ಉಪಟಳದಿಂದ ನಿತ್ಯ ಜಮೀನಿಗೆ ಹೋಗಿ ಬರುವ ಭಯ ಇರುವ ಕಾರಣಕ್ಕೆ ಆಡಿಕೆ ತೋಟ ಮಾಡಲು ನಿರ್ಧಾರಿಸಿದರು, ಆದರಂತೆ ಜುಲೈ 12ರಂದು 300ಕ್ಕೂ ಹೆಚ್ಚು ಗಿಡಗಳನ್ನ ಹಾಕಲಾಗಿತ್ತು, ಕಳೆದ ರಾತ್ರಿ ಆಡಿಕೆ ಗಿಡಗಳನ್ನು ಕಿತ್ತು ಕಿಡಿಗೇಡಿಗಳು ನಾಶ ಮಾಡಿದ್ದಾರೆಂದ್ದು ತಿಪ್ಪಕ್ಕ ತಮ್ಮ ಅಳಲು ತೋಡಿಕೊಂಡರು.

ಜುಲೈ 16ರಂದು ತಿಪ್ಪಕ್ಕನವರ ಮಗ ಅಂಬರೀಷ್ ಜಮೀನಿಗೆ ಬರುವ ಸಮಯದಲ್ಲಿ ದಾಯಾದಿ ಮಕ್ಕಳು ಕಲ್ಲುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ, ಕಲ್ಲು ದಾಳಿಗೆ ಹೆದರಿದ ಅಂಬರೀಷ್ ಅಲ್ಲಿಂದ ಓಡಿ ಪ್ರಾಣಾಪಾಯದಿಂದ ಪರಾಗಿದ್ದಾರೆ, ದಾಯಾದಿಗಳ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಆದರೆ ಪೊಲೀಸರು ರಕ್ಷಣೆ ನೀಡಲು ದೂರು ನೀಡಿದ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದ್ದಾಗಿ ಹೇಳುತ್ತಿದ್ದಾರೆಂದ್ದು ಅಂಬರೀಷ್ ತಮ್ಮ ಸಂಕಟ ತೋಡಿಕೊಂಡರು.

ಸಂಘಟನೆಯ ಮುಖಂಡರೊಬ್ಬರು ದಾಯಾದಿಗಳಿಗೆ ಜಮೀನು ಬಿಟ್ಟುಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ಸಹ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಿಸುವುದ್ದಾಗಿ ಹೇಳುತ್ತಿದ್ದಾರೆ, ನಮಗೆ ಬೇರೆ ದಾರಿ ಇಲ್ಲದೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದ್ದಾಗಿ ಅಂಬರೀಶ್ ಹೇಳಿದರು.