ರಾಜ್ಯಸರ್ಕಾರ ಸಹಕಾರ ಸಂಘಗಳ ವಿರುದ್ಧ ಕಾನೂನು ರೂಪಿಸುತ್ತಿರುವುದು ಸರಿಯಲ್ಲ… ಒಬದೇನಹಳ್ಳಿ ಮುನಿಯಪ್ಪ
ದೊಡ್ಡಬಳ್ಳಾಪುರ : ಸಹಕಾರ ಕ್ಷೇತ್ರವು ದೇಶದ ಆರ್ಥಿಕತೆಗೆ ಬಲ ತುಂಬುವ ಸ್ಥಂಭವಾಗಿದ್ದು. ಈ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿತುಂಬಿವ ಮೂಲಕ ನಮ್ಮ ಭಾರತ ದೇಶವನ್ನು ಅಭಿವೃದ್ಧಿಯ ಕಡೆಗೆ ನೆಡೆಸುವ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ .ಆದರೆ ವ್ಯತಿರಿಕ್ತವಾಗಿ ಕರ್ನಾಟಕ ರಾಜ್ಯ ಸರ್ಕಾರ ಸಹಕಾರಿಗಳ ಹಾಗೂ ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ ಎಂದು ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠದ ಸದಸ್ಯ ಓಬದೇನಹಳ್ಳಿ ಕೆ.ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಎಲ್ಲ ಸಹಕಾರಿಗಳ ಒಂದು ಬಹುದಿನಗಳ ಕನಸು ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನೆ. ಈ ಕನಸನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜುಲೈ 6ರಂದು ಸಾಕಾರಗೊಳಿಸಿದೆ. ಕೃಷಿ ಸಚಿವಾಲಯದಿಂದ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿದೆ.ಸಹಕಾರ ಸಚಿವಾಲಯ ಸ್ಥಾಪನೆಯ ನಂತರ ದೇಶದ ಒಟ್ಟು ಸಹಕಾರ ಸಂಸ್ಥೆಗಳು, ಒಟ್ಟು ಸಹಕಾರ ಸದಸ್ಯರು ಅವುಗಳ ಸ್ವರೂಪ ಇತ್ಯಾದಿ ಮಾಹತಿಯನ್ನು ಸಂಗ್ರಹಿಸಲಾಗಿದೆ. ಡಿಸೆಂಬರ್ 2023ರವರೆಗೆ ಒಟ್ಟು ಮೂರು ಹಂತದ ಬೇರೆ ಬೇರೆ ಸ್ವರೂಪಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಮಾಹಿತಿ ಪಡೆಯಲಾಗಿದೆ. ಕೇರಳ ಹಾಗೂ ಮಣಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳ ಪೂರ್ಣ ಮಾಹಿತಿ ಸಂಗ್ರಹವಾಗಿದೆ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ಅಂಕಿ ಅಂಶಗಳು ಲಭ್ಯವಾಗಿವೆ ಎಂದರು.
ಕೇಂದ್ರ ಸರ್ಕಾರವು ಸಹಕಾರ ಸೇ ಸಮೃದ್ಧಿ ಎಂಬ ಧೈಯದಡಿಯಲ್ಲಿ ಕಾರ್ಯ ಪ್ರಾರಂಭ ಮಾಡಿದೆ.
ಈ ಕಾರ್ಯಕ್ರಮದ ಮುಖ್ಯಉದ್ದೇಶಗಳು :
*ದೇಶದಲ್ಲಿ ಸಹಕಾರ ಚಳುವಳಿ ಬಲಪಡಿಸುವಿಕೆ.
*ತಳಮಟ್ಟದ ಮೇರೆಗೆ ಅದರ ವ್ಯಾಪ್ತಿ ಹೆಚ್ಚಿಸುವುದು.ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ
*ಸೂಕ್ತ ನೀತಿ, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ರಚನೆ
*ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ, ಸ್ವಾಯತ ಮತ್ತು ಸ್ವಾತಂತ್ರ್ಯ, ಶಿಕ್ಷಣ ಮತ್ತು ತರಬೇತಿ, ಮಾಹಿತಿ,
*ಸಹಕಾರ ಸಂಘಗಳ ಮಧ್ಯ ಉನ್ನತ ಸಹಕಾರ,
*ಇಡೀ ಸಹಕಾರ ಸಮುದಾಯಗಳ ಕಾಳಜಿ ವಹಿಸುವುದಾಗಿದೆ ಎಂದರು.
ವೈದ್ಯನಾಥನ್ ಸಮಿತಿ ಸಿಫಾರಸ್ಸಿನ ಅನ್ವಯ ಕೇಂದ್ರ ಸರಕಾರ, ನಬಾರ್ಡ್ ಹಾಗೂ ರಾಜ್ಯ ಸರಕಾರದ ಒಪ್ಪಂದೊಂದಿಗೆ ಸಹಕಾರ ಇಲಾಖೆಯಲ್ಲಿ ಹತ್ತು ಹಲವಾರು ಬದಲಾವಣೆಯಾಗಿದ್ದು ತದನಂತರ 2011ನೇ ಇಸವಿಯಲ್ಲಿ Article 97th Amendment ಮುಖೇನ ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಬದಲಾವಣೆಯನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ತರಲಾಗಿತ್ತು. ಆದರೆ ರಾಜ್ಯ ಕಾಂಗ್ರೇಸ್ ಸರ್ಕಾರ ಇದನ್ನು ಒಡೆದು ಹಾಕಿ ಆಘಾತಕಾರಿ ಬದಲಾವಣೆ ಬಿಲ್ಲನ್ನು ತರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಈ ಬಿಲ್ಲಿನಲ್ಲಿ ಏನಿದೆ…..????
1. ಎಲ್ಲ ಸದಸ್ಯರಿಗೆ ಮತದಾನದ ಹಕ್ಕು (ಅಂದರೆ ಸಂಘದಲ್ಲಿ ಯಾವುದೇ ವ್ಯವಹಾರ ಮಾಡದೇ ಇದ್ದರೂ, ಯಾವುದೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಭಾಗಿಯಾಗದಿದ್ದರು.)
2. ಚುನಾವಣಾ ಪ್ರಾಧಿಕಾರ ರದ್ದುಪಡಿಸಿ ಸರ್ಕಾರದ ಹಿಡಿತದಲ್ಲಿರುವ ರೆಜಿಸ್ಟ್ರಾರ್ ನಿಯಂತ್ರಣದಲ್ಲಿ ಸಹಕಾರ ಚುನಾವಣಾ ವಿಭಾಗ
3. ಪ್ರಾಥಮಿಕ ಹಂತದಿಂದ ಫೆಡರಲ್ ಹಂತದವರೆಗೆ ಕಾಂಗ್ರೇಸ್ ನೇತೃತ್ವದ ಸರ್ಕಾರದಿಂದ ನಾಮ ನಿರ್ದೇಶನ ಮಾಡಿ ಅವರಿಗೆ ಮತದಾನದ ಹಕ್ಕನ್ನು ನೀಡುವುದು. (ಚುನಾಯಿತ ಆಡಳಿತ ಮಂಡಳಿ ಸದಸ್ಯರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ)
4. ಆಡಳಿತ ಮಂಡಳಿ ಸದಸ್ಯರ ಸಂಖ್ಯೆಯನ್ನು ಪ್ರಾಥಮಿಕ, ಫೆಡರಲ್ ಹಾಗೂ ಅಪಲ್ಸ್ ಸಂಸ್ಥೆಗಳಲ್ಲಿ ಹೆಚ್ಚಿಸುವುದು (ಆರ್ಟಿಕಲ್ 97 ಅಮೆಂಡ್‌ಮೆಂಟ್ ವಿರುದ್ಧವಾಗಿರುತ್ತದೆ)
ರಾಜ್ಯದ ಎಲ್ಲ ಹಂತದ ಸಹಕಾರಿಗಳಲ್ಲಿ ಆತಂಕವೇನೆಂದರೆ ಸಹಕಾರಿ ಕ್ಷೇತ್ರ ಕಾಂಗ್ರೇಸ್ ಕಾಯಕರ್ತರ ನಿರಾಶ್ರಿತರ ಗಂಜಿ ಕೇಂದ್ರವಾಗಬಾರದೆಂಬು ಭಾರತೀಯ ಜನತಾ ಪಾರ್ಟಿ ಸಹಕಾರ ಪ್ರಕೋಷ್ಠದ ವತಿಯಿಂದ ಈ ನಿಯಂತ್ರಣ ಹೇರುವ ಬಿಲ್ಲನ್ನು ತೀವ್ರವಾಗಿ ಖಂಡಿಸುತ್ತೇವೆ. ಎಲ್ಲ ಸಹಕಾರಿಗಳ ಪರವಾಗಿ ಈ ಬಿಲ್ಲನ್ನು ತರಕೊಡದೆಂದು ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆ ಎಂದರು.
ಸರ್ಕಾರದ ಹಸ್ತಕ್ಷೇಪ ಹಾಗೂ ವಿರೋಧಿ ಬಿಲ್ಲಿನ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.