ಬೀದಿಬದಿ ವ್ಯಾಪಾರಿಗೆ ಕೆಐಎಡಿಬಿ ಸಿಬ್ಬಂದಿಯಿಂದ ಕಿರುಕುಳ
ದೊಡ್ಡಬಳ್ಳಾಪುರ : ಹೆಂಡತಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಪುಟ್ಟ ಸಂಸಾರ, ಇಡೀ ಸಂಸಾರಕ್ಕೆ ಆಧಾರವಾಗಿದ್ದು ಪೆಟ್ಟಿ ಅಂಗಡಿ, ಟೀ, ಕಾಫಿ ಮತ್ತು ತಿಂಡಿ ತಿನಿಸು ಮಾರಾಟದಿಂದ ಜೀವನ ನಡೆಸುತ್ತಿದ್ದ, 8 ವರ್ಷಗಳಿಂದ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸುತ್ತಿದ್ದ ವ್ಯಾಪಾರಿಗೆ ಕೆಐಎಡಿಬಿ ಸಿಬ್ಬಂದಿ ದುಸ್ವಪ್ನದಂತೆ ಕಾಡುತ್ತಿದ್ದಾನೆ, ಅಂಗಡಿಯನ್ನ ತೆಗೆಯುವಂತೆ ಪ್ರತಿದಿನ ಬಂದು ಕಿರುಕುಳ ಕೊಡುತ್ತಿದ್ದಾನೆಂದು ಸಣ್ಣ ವ್ಯಾಪಾರಿ ಅಳಲು ತೊಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಇಂಡಿಕಾ ಕಾರ್ಖಾನೆ ಬಳಿ ಪ್ರಶಾಂತ್ ಕೆ.ಜಿ ಎಂಬುವರು ಪೆಟ್ಟಿಯಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಕಳೆದ 8 ವರ್ಷಗಳಿಂದ ಕಾಫಿ,ಟೀ ಮತ್ತು ತಿಂಡಿ ತಿನಿಸು ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ, ಆದರೆ ಕಳೆದ 15 ದಿನಗಳಿಂದ ರವಿ ಎಂಬ ವ್ಯಕ್ತಿ ಅಂಗಡಿ ತೆಗೆಯುವಂತೆ ಕಿರುಕುಳು ಕೊಡುತ್ತಿದ್ದಾನೆ, ಕೆಐಎಡಿಬಿ ಮೇಲ್ವಿಚಾರಕನೆಂದು ಹೇಳಿ ಪ್ರತಿದಿನ ಅಂಗಡಿಯ ಬಳಿ ಬಂದು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾನೆಂದು ಪ್ರಶಾಂತ್ ತಮ್ಮ ನೋವು ತೊಂಡಿಕೊಂಡರು. ರಕ್ಷಣೆ ನೀಡುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.