ಇಲ್ಲೊಂದು ಅಪರೂಪದ ಮಂತ್ರ ಮಾಂಗಲ್ಯ ಆಶಯದ ವಿವಾಹ ಕಾರ್ಯಕ್ರಮ

ದೊಡ್ಡಬಳ್ಳಾಪುರ:ಇಲ್ಲೊಂದು ಮದುವೆ ಕಾರ್ಯಕ್ರಮ. ಇಲ್ಲಿ ಯಾವುದೇ ಮಂತ್ರ ಘೋಷ ಗಳ ವಾಕ್ಯವಿಲ್ಲ. ಶಾಸ್ತ್ರ ಸಂಪ್ರದಾಯದ ಸುಳಿವಿಲ್ಲ. ನಾದ ಸ್ವರದ ಗಾನವಿಲ್ಲ. ಕಲ್ಯಾಣ ಮಂಟಪಕ್ಕೆ ಅಲಂಕಾರವಿಲ್ಲ. ವದು ವರರಿಗೆ ಅದ್ದೂರಿ ಪೋಷಾಕು ಗಳಿಲ್ಲ. ಬಾಜಾ ಭಜಂತ್ರಿಗಳ ಓಡಾಟವಿರಲಿಲ್ಲ. ಇದ್ಯಾವುದೇ ಆಡಂಬರವಿಲ್ಲದೆ ಸದ್ದು ಗದ್ದಲವಿಲ್ಲದೆ ಸರಳವಾಗಿ ಚೊಕ್ಕವಾಗಿ ನಡೆದ ಮಂತ್ರ ಮಾಂಗಲ್ಯ ಮದುವೆ ಎಲ್ಲರ ಗಮನ ಸೆಳೆದಿತ್ತು.

ಕುವೆಂಪು ರವರ ಮಂತ್ರ ಮಾಂಗಲ್ಯ ಆಶಯದ ವಿವಾಹ ನಡೆದದ್ದು ಆಗಸ್ಟ್ 11ಭಾನುವಾರ ನಗರಸಭಾ ಸದಸ್ಯ ಪ್ರಭುದೇವ್ ರವರ ತೋಟದಲ್ಲಿ. ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘದ ಮುಖಂಡರಾದ ತಿಪ್ಪುರು ಮುತ್ತೇಗೌಡ ಉಮಾ ದಂಪತಿಗಳ ಪುತ್ರಿ ಬೃಂದಾ ಹಾಗೂ ಮುನೇಶ್ವರ ರಾವ್ ಗೀತಾವತಿ ದಂಪತಿಗಳ ಪುತ್ರ ಪೃತ್ವಿಕ್ ಘೋರ್ಪಡೆ ಜೋಡಿ ಮಂತ್ರ ಮಾಂಗಲ್ಯದ ಆಶಯದಂತೆ ದಾಂಪತ್ಯಕ್ಕೆ ಕಾಲಿಟ್ಟ ನೂತನ ದಂಪತಿಗಳು. ಈ ಮಂತ್ರ ಮಾಂಗಲ್ಯ ವಿವಾಹದ ಪೌರೋಹಿತ್ಯ ಅರ್ಥಾತ್ ಸಾರತ್ಯವನ್ನು ವಹಿಸಿ ದ್ದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ತಿಪ್ಪುರ್ ಲವಕುಮಾರ್. ಕುವೆಂಪು ರವರ ಸರಳ ವಿವಾಹದ ಆಶಯದ ನುಡಿಗಳನ್ನು ಸಭೆಗೆ ಅರ್ಥೈಸಿ ಮಂತ್ರಮಂಗಲ್ಯದ ಘೋಷವಾಕ್ಯವನ್ನು ವದುವರರಿಗೆ ಬೋದಿಸಿ ಮಾಂಗಲ್ಯ ಧಾರಣ ಕಾರ್ಯವನ್ನು ಅಚ್ಚುಕಟ್ಟಾಗಿ ಲವಕುಮಾರ್ ನೆರವೇರಿಸಿದರು. ಮಾಂಗಲ್ಯ ಧಾರಣೆ ವೇಳೆ ಅಕ್ಷತೆ ಇಲ್ಲದೆ ಕರತಾ ಡನದ ಮೂಲಕ ವದು ವರರಿಗೆ ಬಂದು ಮಿತ್ರರು ಶುಭ ಹಾರೈಸಿದ್ದು ವಿಶೇಷವಾಗಿತ್ತು.ಅಪರೂಪದ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮಕ್ಕೆ ಪ್ರೊ, ನಂಜುಂಡ ಸ್ವಾಮಿ ರವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ, ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಪ್ರಗತಿಪರ ಚಿಂತಕ ಅದ್ದೇ ಮಂಜುನಾಥ್, ಬಿ. ಬಿ. ಎಂ. ಪಿ. ಯಲಹಂಕ ಆಯುಕ್ತ ಕರೀಗೌಡ, ಸುಲೋಚನಮ್ಮ ವೆಂಕಟರೆಡ್ಡಿ, ಮೇಜರ್ ಮಹಾಬಲೇಶ್ವರ್, ಅವಲಮೂರ್ತಿ, ಪ್ರಭುದೇವ್, ಸಂಜೀವ್ ನಾಯಕ ಅಂಜಿ, ಸೇರಿದಂತೆ ರೈತ, ದಲಿತ, ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದು ಮಂತ್ರ ಮಾಂಗಲ್ಯ ವಿವಾಹಕ್ಕೆ ಸಾಕ್ಷಿಯಾದರು.

ಅದ್ದೂರಿ ಮದುವೆಗಳ ಹೆಸರಲ್ಲಿ ದುಂದು ವೆಚ್ಚ ಮಾಡಿ ಸಮಸ್ಯೆ ತಂದುಕೊಳ್ಳುವವರ ನಡುವೆ ಯಾವುದೇ ದುಂದು ವೆಚ್ಚವಿಲ್ಲದೆ ಸರವಾಗಿ ಅದರಲ್ಲೂ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ನಡೆದು ಕೊಂಡು ಆದರ್ಶ ಮೆರೆದ ನೂತನ ವದು ವಾರರಾದ ಬೃಂದಾ, ಪೃಥ್ವಿ ಮತ್ತು ಪೋಷಕರಾದ ಉಮಾ ಮುತ್ತೇಗೌಡ ಹಾಗೂ ಗೀತಾವತಿ ಮುನೇಶ್ವರ ರಾವ್ ದಂಪತಿಗಳ ಇತರರಿಗೆ ಮಾದರಿಯಾದ ಕಾರ್ಯ ನಿಜಕ್ಕೂ ಶ್ಲಾಘನೀಯ.