ಕರ್ನಾಟಕಕ್ಕೆ ರಾಜ್ಯಪಾಲರು ಬಂದಿರೋದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುವುದಕ್ಕೆ
–ರಾಜಘಟ್ಟ ನಾರಾಯಣಸ್ವಾಮಿ
ದೊಡ್ಡಬಳ್ಳಾಪುರ : ಕರ್ನಾಟಕಕ್ಕೆ ರಾಜಪಾಲರು ಬಂದಿರೋದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹಾಳು ಮಾಡುವುದಕ್ಕೆ, ದೇಶದಲ್ಲೇ ಪ್ರಮಾಣಿಕ ಮುಖ್ಯಮಂತ್ರಿ ಅಂತಾನೇ ಹೆಸರು ಮಾಡಿದವರು ನಮ್ಮ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಜಘಟ್ಟ ನಾರಾಯಣಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಪಾಲರು ತನಿಖೆಗೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡರು ರಾಜಪಾಲರ ವಿರುದ್ಧ ಪ್ರತಿಭಟನೆಯನ್ನ ನಡೆಸಿದರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು,
ಪ್ರತಿಭಟನೆಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಜಘಟ್ಟ ನಾರಾಯಣಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ 136 ಸ್ಥಾನಗಳನ್ನ ಗೆಲ್ಲುವ ಮೂಲಕ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಇದನ್ನ ಸಹಿಸದ ಬಿಜೆಪಿಯವರು ವಿನಾಕಾರಣ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ, ರಾಜ್ಯದಿಂದ 19 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ, ಕೇಂದ್ರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುವ ಧೈರ್ಯ ಅವರಿಗಿಲ್ಲ, ಕೆ.ಹೆಚ್.ಮುನಿಯಪ್ಪ 7 ಬಾರಿ ಸಂಸದರಾಗಿದ್ದವರು 2 ಬಾರಿ ಕೇಂದ್ರ ಸಚಿವರಾಗಿದ್ದವರು, ಕೇಂದ್ರ ಸರ್ಕಾರದ ಬಳಿ ಅಕ್ಕಿ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರು ರಾಜ್ಯಕ್ಕೆ ಅಕ್ಕಿ ಕೊಡದೆ ದ್ವೇಷ ರಾಜಕೀಯ ಮಾಡಿದರು.
ರಾಜ್ಯದಲ್ಲಿ 19 ಬಿಜೆಪಿ ಸಂಸದರು ಗೆದ್ದಿದ್ದಿರಾ, 3ನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ ನಾವು ಸ್ವಾಗತಿಸುತ್ತೇವೆ, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನ ರಾಜೀನಾಮೆ ಕೊಡಿಸುವಂತ ಷಡಂತ್ರ ಯಾಕೇ ಮಾಡುತ್ತಿದ್ದಿರಾ. ಇದು ಪ್ರಧಾನಿಯಾಗಿದ್ದವರು ಮಾಡುವ ಕೆಲಸವಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಯೋಗ್ಯರಲ್ಲ.
ಕರ್ನಾಟಕಕ್ಕೆ ರಾಜ್ಯಪಾಲರು ಬಂದಿರೋದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹಾಳು ಮಾಡುವುದಕ್ಕೆ, ರಾಜ್ಯಪಾಲರ ಬಳಿ ಹಲವು ಆರೋಪಗಳ ಪಟ್ಟಿಯೇ ಇದೆ, ಆದರೆ ಸಿದ್ದರಾಮಯ್ಯನವರನ್ನ ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ದೇಶದಲ್ಲಿಯೇ ಪ್ರಮಾಣಿಕ ಮುಖ್ಯಮಂತ್ರಿ ಎಂದು ಹೆಸರು ಮಾಡಿದ್ದವರು ಅವರನ್ನ ಅನ್ನರಾಮಯ್ಯ ಅಂತಾನೇ ಕರೆಯಲಾಗುತ್ತದೆ, ಸಿದ್ದರಾಮಯ್ಯನವರು ಪಂಚ ಗ್ಯಾರಂಟಿಗಳನ್ನ ಜನರಿಗೆ ಕೊಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ, ಬಿಜೆಪಿಯವರು ಇಂತಹ ಯೋಜನೆಗಳನ್ನ ಜನರಿಗೆ ಕೊಟ್ಟಿದ್ದಿರಾ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಜನರಿಗೆ ಅರ್ಧವಾಗುವಂತೆ ಬಿಡಿಸಿ ಬಿಡಿಸಿ ಹೇಳಿದ್ದಾರೆ, ತಮ್ಮ ಪತ್ನಿಯ ಜಮೀನು ಸ್ವಾಧೀನ ಮಾಡಿದಕ್ಕಾಗಿ ಮುಡಾದವರು ಪರಿಹಾರವಾಗಿ ಸೈಟ್ ಗಳನ್ನ ನೀಡಿದ್ದಾರೆ, ದ್ವೇಷ ರಾಜಕಾರಣ ಮಾಡುವ ಕಾರಣಕ್ಕೆ ಬಿಜೆಪಿಯವರು ಈ ವಿಷಯವನ್ನ ಇಟ್ಟುಕೊಂಡು ಮೈಸೂರು ಪಾದಯಾತ್ರೆ ಮಾಡಿದ್ರು, ಇದರಿಂದ ಯಾವ ಪ್ರಯೋಜನವಾಗಿದೆ ಎಂದರು.
ರಾಜ್ಯಪಾಲರಿಗೆ ನಾವು ಮನವಿ ಮಾಡುತ್ತೇವೆ, ಸಿದ್ದರಾಮಯ್ಯ ವಿರುದ್ಧ ಕೇಸ್ ವಾಪಸ್ ತೆಗೆದುಕೊಳ್ಳಿ, ಇಲ್ಲದಿದ್ದಾರೆ ರಾಜಭವನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡುವುದ್ದಾಗಿ ಎಚ್ಚರಿಕೆ ನೀಡಿದರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ, ರಾಜಭವನದ ಮೂಲಕ ದ್ವೇಷ ಕಾರಣ ಮಾಡುವ ಮೂಲಕ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ, ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು, ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ಕೊಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಎಸ್.ರಾಜಣ್ಣ, ಕಾಂಗ್ರೆಸ್ ಸೇವಾದಳ ಕಸಬಾ ಅಧ್ಯಕ್ಷರಾದ ಗಂಗರಾಜು, ದಾಸಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಾರದ ಸುಮಂತ್ ಗೌಡ, ತಿಮ್ಮಸಂದ್ರ ಗ್ರಾಮ ಪಂಚಾಯತ್ ಸದಸ್ಯರಾದ ರಘು, ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ರವಿಯಣ್ಣ ಸೇರಿದಂತೆ ರಾಜಘಟ್ಟ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.