ದೊಡ್ಡಬಳ್ಳಾಪುರ ತಾಲೂಕು ರಕ್ಷಣಾ ವೇದಿಕೆ ನೂತನ ಅಧ್ಯಕ್ಷರಾಗಿ ಮಂಜುನಾಥ್ ನೇಮಕ…. ಕನ್ನಡ ವಿರೋಧಿ ಕಂಪನಿಗಳ ವಿರುದ್ಧ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಕಿಡಿ
ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷರಾಗಿ ಮಂಜುನಾಥ್ ನಾಯ್ಕ್ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಿಗೆ ಜಿಲ್ಲಾಅಧ್ಯಕ್ಷ ಪುರುಷೋತ್ತಮ ಗೌಡ ಹಾಗೂ ಜೈ ಫೌಂಡೇಶನ್ ಅಧ್ಯಕ್ಷರಾದ ಡಾ.ಜೈ ಕುಮಾರ್ ಅಭಿನಂದನೆ ಸಲ್ಲಿಸಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಮುಖಂಡರು ನೂತನ ಅಧ್ಯಕ್ಷರಿಗೆ ಹೂಮಾಲೆಯನ್ನ ಹಾಕುವ ಮೂಲಕ ಅಭಿನಂಧಿಸಿದರು,ಇದೇ ವೇಳೆ ಕನ್ನಡಿ ಗರ ಪರವಾಗಿ ಕೆಲಸ ಮಾಡುತ್ತಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಮತ್ತು ಕರವೇ ಕಾರ್ಯಕರ್ತರ ಸೇವೆಯನ್ನ ಸ್ಮರಿಸಲಾಗಿತು.
ಕರವೇ ಮುಖಂಡರು ಮತ್ತು ಕಾರ್ಯಕರ್ತರ ಅಭಿನಂಧನೆಯನ್ನ ಸ್ವೀಕರಿಸಿದ ನೂತನ ಅಧ್ಯಕ್ಷ ಮಂಜು ನಾಥ್ ನಾಯ್ಕ್ ಮಾಧ್ಯಮದೊಂದಿಗೆ ಮಾತನಾಡಿದರು, ಕನ್ನಡ ಸೇವೆಯಲ್ಲಿ ನನ್ನನ್ನು ಗುರುತಿಸಿ ತಾಲೂಕು ಅಧ್ಯಕ್ಷ ನಾಗುವ ಅವಕಾಶವನ್ನ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ನೀಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಯಾವತ್ತು ಅವರಿಗೆ ಹೆಸರಿಗೆ ಅಗೌರವ ತರುವ ಕೆಲಸ ಎಂದಿಗೂ ಮಾಡುವುದಿಲ್ಲ, ರಾಜ್ಯ ಸಂಘಟನೆಯ ಕಾರ್ಯದರ್ಶಿಯಾದ ಅಬ್ಬಿಗೆರೆ ವಿನೋದಣ್ಣ ನವರಿಂದ ನಾನು ಕರವೇ ಸಂಘಟನೆಗೆ ಪಾದಾರ್ಪಣೆ ಮಾಡು ವಂತಾಗಿತು, ನನ್ನ ಬೆನ್ನೆಲುಬಾಗಿ ನಿಂತ ಅವರಿಗೆ ಅಭಿನಂದನೆ ಸಲ್ಲಿಸುವೆ, ಸದಾ ನನ್ನ ಜೊತೆಯಲ್ಲಿರುವ ಡಾ.ಜೈ ಕುಮಾರಣ್ಣ ಹಾಗೂ ಅವಕಾಶ ಮಾಡಿ ಕೊಟ್ಟ ಜಿಲ್ಲಾಧ್ಯಕ್ಷರು ಪುರುಷೋತ್ತಮ್ ಗೌಡರಿಗೆ ಋಣಿಯಾಗಿರುವುದಾಗಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅದ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಗಾರಿಕಾ ವಸಾಹತುಗಳು ಸ್ಥಾಪನೆ ಯಾಗುತ್ತಿದ್ದು,ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಉಗ್ರ ಹೋರಾಟವನ್ನು ಮಾಡಲಿದ್ದೇವೆ, ಕಂಪನಿಗಳು ಇದನ್ನ ಎಚ್ಚರಿಕೆ ಎಂದೆ ಭಾವಿಸಬೇಕು, ನಾವು ನಿಮ್ಮ ಕಂಪನಿಯ ಬಾಗಿಲ ತನಕ ಬರುವ ತನಕ ಮಾತ್ರ ನಿಮ್ಮ ಬೇಳೆ ಬೇಯೊದು, ನಾವು ಬಂದ ಮೇಲೆ ನಿಮ್ಮ ಕೆಲಸಗಳಿಗೆ ತೊಂದರೆಯಾಗಲಿದೆ, ನೀವು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ ನಮಗೆ ತಿಳಿದಿದೆ, ನಾವು ಅಂಕಿ ಅಂಶದ ಸಮೇತ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ.ಕನ್ನಡ ನಾಡಿನಲ್ಲಿ ಇದ್ದೀರಾ ಮೊದಲು ಕನ್ನಡಿಗರಿಗೆ ಉದ್ಯೋಗ ನೀಡುವ ಕೆಲಸ ಮಾಡಿ, ನಿಮ್ಮ ಯಾವುದೇ ಆಟಗಳನ್ನು ಆಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಾಡು ನುಡಿ ಜಲ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಹೋರಾಟ ಮಾಡುವಾಗ ಕೆಲವು ಕಂಪನಿಗಳು ಕನ್ನಡಿಗರ ಪರವಾಗಿ ನಿಂತಿವೆ, ಅವರಿಗೆ ನಾವು ಸದಾ ಋಣಿಗಳು.ಆದರೆ, ಕೆಲವು ಕಂಪನಿಗಳು ಕನ್ನಡಿಗರನ್ನ ಕೆಣಕುವ ಕೆಲಸ ಮಾಡುತ್ತಿವೆ, ಅವರಿಗೆ ನಾವು ಸಿಂಹಸ್ವಪ್ನವಾಗುತ್ತೇವೆ. ಇಂಡೇನಾ ಕಂಪನಿಯ ಲೋಪ ದೋಷಗಳ ವಿರುದ್ಧ ನಮ್ಮ ಸಂಘಟನೆ ಹೋರಾಟ ಮಾಡಿತ್ತು, ಪತ್ರಕರ್ತರು ಸುದ್ದಿಯನ್ನ ಬರೆದಿದ್ದಕ್ಕೆ ವಕೀಲರ ಮೂಲಕ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ,ನೀವು ಸರಿ ಇದ್ದಲ್ಲಿ ಪತ್ರಿಕಾ ಗೋಷ್ಠಿಯನ್ನ ನಡೆಸಿ ನೈಜ ವಿಷಯವನ್ನುಜನತೆ ಮುಂದಿಡಿ ಎಂದು ಸವಾಲು ಹಾಕಿದರು.
ಜೈ ಫೌಂಡೇಷನ್ ಅಧ್ಯಕ್ಷ ಡಾ.ಜೈ ಕುಮಾರ್ ಮಾತನಾಡಿ,ನನ್ನ ಸಹೋದರ ಮಂಜುನಾಥ್ ತಾಲೂಕು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವುದು ಸಂತೋಷದ ವಿಷಯ,ನಾವು ಗಡಿ ಭಾಗದಲ್ಲಿರುವುದರಿಂದ ಪರಭಾಷಿಕ ಹಾವಳಿ ಹೆಚ್ಚಾಗಿದೆ, ಕನ್ನಡಿಗರಿಗೆ ಸಹಿಸಿಕೊಳ್ಳುವ ಗುಣ ಇದೆ ಹಾಗೆಯೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಯಲು ಬಿಡುವುದಿಲ್ಲ, ನಮ್ಮ ಈ ಒಳ್ಳೇಯತನವನ್ನ ದುರುಪಯೋಗ ಪಡಿಸಿಕೊಂಡು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ, ಪರಭಾಷಿಕರಿಗೆ ಉದ್ಯೋಗ ಕೊಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ,ಇಲ್ಲಿಗೆ ಬಂದು ಹಣ ಸಂಪಾದನೆ ಮಾಡುತ್ತಿದ್ದಾರೆ ಈ ಋಣವನ್ನ ತೀರಿಸಲು ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಕಂಪನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.