ಗಣೇಶೋತ್ಸವ ದೊಡ್ಡಬಳ್ಳಾಪುರ ಪೋಲಿಸರಿಂದ ಶಾಂತಿ ಸಭೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಪೋಲಿಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಿನ್ನಲೆ ಯಲ್ಲಿ ಶಾಂತಿ ಸಭೆ ನೆಡೆಯಿತು.ನಗರ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಡಿ.ವೈ.ಎಸ್.ಪಿ ರವಿ ರವರ ನೇತೃತ್ವದಲ್ಲಿ ನೆಡೆದ ಸಭೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಾರ್ಯಕ್ರಮ ನಡೆಯುವ ವೇಳೆ ಮತ್ತು ಮೆರವಣಿಗೆ ಸಂದರ್ಭಗಳಲ್ಲಿ ಸರ್ಕಾರ ಮತ್ತು ಪೋಲಿಸ್ ಇಲಾಖೆಯ ನಿಯಮಗಳನ್ನು ಕಾರ್ಯಕ್ರಮ ಆಯೋಜಕರಿಗೆ ತಿಳಿಸಲಾಯಿತು.ನಿಯಮ ಮೀರಿದಲ್ಲಿ ಮುಲಾಜಿಲ್ಲದೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ಪೋಲೀಸ್ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಗಳಾದ ಅಮರೇಶ್ ಗೌಡ ,ಸಾದಿಕ್,ಪಾಷ, ಡಾ.ಎಂ.ಬಿ ನವೀನ್ ಕುಮಾರ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.