ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಬದುಕಿನ ಮೌಲ್ಯಗಳು ಅಡಗಿವೆ– ಧೀರಜ್ ಮುನಿರಾಜ್
ದೊಡ್ಡಬಳ್ಳಾಪುರ:ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಛೇರಿ ಅವರಣದಲ್ಲಿ ಶ್ರಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಸಕ ದೀರಜ್ ಮುನಿರಾಜು ಮಾತನಾಡಿ,ರಾಮಾಯಣ ಹಾಗು ಮಹಾಭಾರತ ಪ್ರಪಂಚದ ಶ್ರೇಷ್ಠ ಕಾವ್ಯಗಳಾಗಿದ್ದು ಶ್ರೀ ಕೃಷ್ಣ ಮಹಾಭಾರತದ ಯುದ್ದದ ಸುನ್ನೀ ವೇಷಗಳಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡಿ ಮಾನವನ ಜೀವನದ ಮೌಲ್ಯಗಳ ಬಗ್ಗೆ ಪ್ರತಿಪಾದಿಸಲಾಗಿದ್ದು ಶ್ರೀ ಕೃಷ್ಣನ ಉಪದೇಶದಲ್ಲಿ ದುಷ್ಟರ ಶಿಕ್ಷೆ ಶಿಷ್ಟರ ರಕ್ಷಣೆ ಮಾಡುವ ಉದ್ದೇಶವಾಗಿದೆ ಎಂದು ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡಲಾಗಿದ್ದು ಅದರೆ ಭಗವದ್ಗೀತೆಯಲ್ಲಿನ ಅದರ್ಶಗಳು ಮನುಷ್ಯ ಬದುಕಿನ ಮೌಲ್ಯಗಳು ಅಡಗಿವೆ.
ಧರ್ಮದ ವಿರುದ್ದ ದುಷ್ಟಶಕ್ತಿಗಳು ಆವತರಿಸಿದಾಗ ದರ್ಮ ರಕ್ಷಣೆ ಮಾಡುವುದಕ್ಕಾಗಿ ಶ್ರೀಕೃಷ್ಣ ಜನ್ಮತಾಳುತ್ತಾನೆ ಈ ಪ್ರಕೃತಿಯಲ್ಲಿ ಯಾರೆ ತಪ್ಪು ಮಾಡಿದರು ಅವರು ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂಬುದು ಶ್ರೀ ಕೃಷ್ಣನ ನಿಲುವಾಗಿತ್ತು ಅರ್ಜುನನಿಗೆ ಶ್ರೀಕೃಷ್ಣ ಗೀತೋಪದೇಶ ಮಾಡಿ ನೀನು ತೃಣ ಮಾತ್ರ ಎಲ್ಲವು ಪ್ರಕೃತಿಯ ನಿಯಮ ಎಂದಾಗ ಅರ್ಜುನನಿಗೆ ಆಗ ನನ್ನದು ನೆಪ ಮಾತ್ರವೇ ಎಂಬುದು ಅರಿವು ಮೂಡಿತ್ತು, ಇಂತಹ ಸನ್ನೀವೇಶಗಳನ್ನು ನಾವುಗಳು ಅರಿಯ ಬೇಕಾಗುತ್ತದೆ,ಬದುಕಿನ ತತ್ವಗಳು ಅಡಗಿದ್ದು ಇಂದಿನ ಯುವ ಪೀಳಿಗೆ ಹಾಗು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾದರೆ ಬದುಕಿನ ಕ್ರಮ ಬದಲಾಗುತ್ತದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಯಾದವ ಗೊಲ್ಲ ಸಂಘದ ಅಧ್ಯಕ್ಷ ಡಿ ಜಿ ಕೃಷ್ಣಮೂರ್ತಿ ಮಾತನಾಡಿ
ಹಿಂದುಳಿದ ಕಾಡುಗೂಲ್ಲ ಅಭಿವೃದ್ದಿ ನಿಗಮ ಕೇವಲ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಹಾಗು ಸಮುದಾಯಗಳಿಗೆ ನಿವೇಶನ ನೀಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಮತ್ತು ಗೊಲ್ಲ ನಿಗಮ ಮಂಡಲಿಗೆ ಬರುವ ಅನುದಾನ ಕಡಿಮೆಯಾಗಿದೆ ಅದರಿಂದ ಸದನದಲ್ಲಿ ಹಿಂದುಳಿದ ಸಮುದಾಯಗಳ ಕಡೆ ಗಮನ ಸೆಳೆಯುತವಂತಾಗಬೇಕು ಎಂದರು .
ಯಾದವ ಗೊಲ್ಲ ಸಮುದಾಯ ಚಟುವಟಿಕೆಗಳಿಗೆ
ಸಂಘಕ್ಕೆ ಎರಡು ಎಕರೆ ಜಾಗ ಮುಂಜೂರು ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಶ್ರೀ ವಿದ್ಯಾ ವಿಭಾ ರಾಥೋಡ್ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರ ಹಳ್ಳಿ ರವಿ ತಾಲ್ಲುಕು ಯಾದವ ಗೊಲ್ಲ ಸಂಘದ ಪ್ರದಾನ ಕಾರ್ಯದರ್ಶಿ ಎನ್ ರಮೇಶ ವಕೀಲ ಸುನೀಲ್ ಕುಮಾರ್ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗರಾಜ್ ಅಂಬರೀಶ್ ಹೆಚ್ ಎಸ್ ರಾಜೇಂದ್ರ ಬಾಬು ನಗರಸಭೆ ಸದಸ್ಯ ಬಂತಿ ವೆಂಕಟೇಶ ಹಾಜರಿದ್ದರು.