ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ : ಆರೋಪಿ ಬಂಧನದಲ್ಲಿ

 

ಚಾಮರಾಜನಗರ:ಮಹಿಳೆಯರಿಗೆ ಸಾಲ,ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದ ಆರೋಪಿಯನ್ನು ಅಪರಾಧ ಠಾಣೆ ಪೊಲೀಸರು(ಸೆನ್) ಬಂಧಿಸಿದ್ದಾರೆ.

ಹರೀಶ್ ಯೆಲ್ಲಪ್ಪ ಮಜ್ಜಗಿ ಬಂಧಿತ ಆರೋಪಿ. ಈತ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಹಿಳೆಯರಿಗೆ ಬಿಎಸ್ಎಸ್ ಸಂಘದ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದು ರಾಜ್ಯದ ಮೈಸೂರು ಹುಣಸೂರು, ಬೆಂಗಳೂರಿನಲ್ಲಿ ತಮ್ಮ ಸಂಘದ ಬ್ರಾಂಚ್‌ಗಳಿದ್ದು ಹೈದರಾಬಾದ್‌ನಲ್ಲಿ ಮುಖ್ಯ ಕಚೇರಿ ಇದೆ ಎಂದು ಹೇಳಿಕೊಂಡು ಸಾಲ ಬೇಕಾದ ಮಹಿಳೆಯರ ಬಳಿ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡಿದ್ದ. 3 ಲಕ್ಷ
ರೂ. ಸಾಲ ಬೇಕಾದವರು 4,500 ಲಾಗಿನ್ ಫೀಸ್, 2 ಲಕ್ಷ ರೂ. ಬೇಕಾದವರು 3000 ರೂ. ಕೊಡಬೇಕೆಂದು ಅಮಾಯಕ
ರನ್ನು ಯಾಮಾರಿಸಿ 21 ಜನರಿಂದ 14,22,500 ರೂ. ಗಳನ್ನು ಪಡೆದುಕೊಂಡಿದ್ದ ಈತನ ವಿರುದ್ಧ ತಾಲೂಕಿನ ಮಂಗಲ ಗ್ರಾಮದ ರೇಖಾ ಎಂಬುವವರು ಸೆನ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮೈಸೂರಿನಲ್ಲಿದ್ದ ಆರೋಪಿಯನ್ನು ಬಂಧಿಸಿ ಕರೆ ತಂದರು ವಿಚಾರಣೆ ನಡೆಸಿದಾಗ ಈತ ಇನ್‌ಸ್ಟಾಗ್ರಾಂ ಮೂಲಕ ಹೆಂಗ ಸರನ್ನು ಪರಿಚಯ ಮಾಡಿ ಕೊಂಡು ಅವರ ವಿಶ್ವಾಸಗಳಿಸಿ ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಲಾಗಿನ್ ಪೀಸ್, ಪ್ರೋಸೆಸಿಂಗ್ ಇಂಡಿ ಫೀಸ್ ಎಂದು ನಂಬಿಸಿ
ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಬೇರೆ ಬೇರೆ ಮೊಬೈಲ್ ನಂಬರ್‌ಗಳನ್ನು ಬಳಸುತ್ತಿದ್ದಂತಹ ಕೃತ್ಯಗಳು ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಎಸ್.ಎಲ್‌. ಸಾಗರ್, ಸಬ್‌ಇನ್ಸ್‌ಪೆಕ್ಟರ್ ಮಹದೇವಸ್ವಾಮಿ, ಮುಖ್ಯ ಪೇದೆಗಳಾದ ರಮೇಶ್ ಕುಮಾರ್, ಸುಬ್ರಮಣ್ಯ, ಪೇದೆಗಳಾದ ಮಂಜುನಾಥ್, ಮೋಹನ್, ಎಂ. ಮಹೇಶ್, ಶ್ರೀನಿವಾಸಮೂರ್ತಿ, ಅಬ್ದುಲ್‌ಖಾದ‌ರ್, ಭೀಮಪ್ಪ , ಪ್ರಿಯಾಂಕಾ, ರಮ್ಯ ಪಾಲ್ಗೊಂಡಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ