ರೈಲಿನಿಂದ ಬಿದ್ದುಅಪರಿಚಿತ ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ದಿನಾಂಕ:-16-10-2024 ರಂದು ಬೆಳಗ್ಗೆ ರಾಜಾನುಕುಂಟೆ ಮತ್ತು ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಗಂಡಸು ಸುಮಾರು 55 ರಿಂದ 60 ವರ್ಷದವನು ಪ್ರಯಾಣ ಮಾಡುವಾಗ್ಗೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದು ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 208/2024 ಕಲಂ 194 BNSS ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
*ಚಹರೆ* – 5.5ಅಡಿ ಎತ್ತರ, ದುಂಡು ಮುಖ ಗಿಡ್ಡನೆಯ ಮೂಗು ಬಿಳಿ ಮಿಶ್ರಿತ ಗಡ್ಡ ಮೀಸೆ ದಪ್ಪನೆಯ ಕೆನ್ನೆಗಳು ಸಾದಾರಣ ದೃಢಕಾಯ ಶರೀರ ತಲೆಯಲ್ಲಿ ಸುಮಾರು 1.5 ಇಂಚು ಉದ್ದದ ಕೂದಲು,ಇದ್ದು.
*ಬಟ್ಟೆಗಳು* -ಕಡು ನೀಲಿಬಿಳಿಕೆಂಪು ಬಣ್ಣದ ಲುಂಗಿ ಬಿಳಿ ಬಣ್ಣದ ತುಂಬು ತೊಳಿನ ಶರ್ಟ್ , ಕಡು ನೀಲಿ ಬಣ್ಣದ ಲಾಡಿ ಚಡ್ಡಿ ಸೊಂಟದಲ್ಲಿ ಕೆಂಪನೆಯ ಉಡದಾರ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.