ಘಾಟಿ ದೇವಾಲಯಕ್ಕೆ ಸೇರಿದ ಗುತ್ತಿಗೆ ಅವಧಿ ಮುಗಿದ ಅಂಗಡಿಗಳು ದೇವಾಲಯದ ವಶಕ್ಕೆ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಒಟ್ಟು ಎಂಟು ಅಂಗಡಿಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವುದರಿಂದ ಅನಧಿಕೃತ ಬಾಡಿಗೆದಾರನ್ನು ಖುಲಾಸೆಪಡಿಸಲು ಪಿ ಪಿ ಎ ಪ್ರಾಧಿಕಾರ ಅಧಿಕಾರಿಯು ಅದ ಮಾನ್ಯ ಆಯುಕ್ತರು ದಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಅದೇಶದ ಮೆರೆಗೆ ತೆರವು ಕಾರ್ಯ ಮಾಡಲಾಯಿತು.
ಮಾನ್ಯ ಆಯುಕ್ತರ ಆದೇಶದನ್ವಯ ದಿನಾಂಕ 25-10-2024 ರಂದು ದೇವಾಲಯದ ಮುಂದೆ ಎಡ ಮತ್ತು ಬಲ ಬಾಗದ ಎಂಟು ಅಂಗಡಿಗಳನ್ನು ಖುಲ್ಲಾ ಪಡಿಸಿ ದೇವಾಲಯದ ವಶಕ್ಕೆ ಪಡೆದು ಬೀಗ ಹಾಕಿ ಮುದ್ರೆ ಹಾಕಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಜರಾಯಿ ತಹಶೀಲ್ದಾರ್ ಶ್ರೀಮತಿ ಜೆ ಜೆ. ಹೇಮಾವತಿ ಘಾಟಿ ದೇವಾಲಯದ ಗ್ರಾಮಾಂತರ ಉಪ ಠಾಣೆಯ ಪೋಲಿಸ್ ಸಿಬ್ಬಂದಿ ಧೆಪೇದಾರ್ ರಂಗನಾಥ್ ಪೋಲಿಸ್ ಸಿಬ್ಬಂದಿ ಹಾಗು ದೇವಾಲಯದ ಸಿಬ್ಬಂದಿ ಹಾಜರಿದ್ದರು.