ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ, ಶಾಸಕ ಎ ಆರ್ ಕೃಷ್ಣಮೂರ್ತಿ

ಯಳಂದೂರು:ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡಗೆರೆ ಗ್ರಾಮದಲ್ಲಿ ಸುಮಾರು 85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಕ್ಕಲಿಗರ ಸಮುದಾಯ ಭವನ ಹಾಗೂ ಸಿ ಸಿ ರಸ್ತೆ ಮತ್ತು ಸಿ ಸಿ ಚರಂಡಿ ಹಾಗೂ ಪರಿಶಿಷ್ಟ ಜಾತಿಯ ಬೀದಿಯಲ್ಲಿ ಸಿ ಸಿ ರಸ್ತೆ ಮತ್ತು ಸಿ ಸಿ ಚರಂಡಿ ಕಾಮಗಾರಿಗಳಿಗೆ ಶಾಸಕರಾದ ಶ್ರೀ ಎ ಆರ್ ಕೃಷ್ಣಮೂರ್ತಿ ರವರು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರಾದ ಶ್ರೀ ಹೆಚ್ ವಿ ಚಂದ್ರು,ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷರಾದ ತೋಟೇಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ ಯೋಗೇಶ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಡಗೆರೆ ದಾಸ್ ,ಚಾಮುಲ್ ನಾಮ ನಿರ್ದೇಶಿಕ ಕಮರವಾಡಿ ರೇವಣ್ಣ , ಗುತ್ತಿಗೆದಾರರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ವಡಗೆರೆ ಯೋಗೇಂದ್ರ ಸಿ , ಬಗರ್ ಹುಕಂ ಸಾಗುವಳಿ ಸದಸ್ಯರಾದ ಬಂಗಾರು, ಇಂಜಿನಿಯರ್ ಚಿಕ್ಕ ಲಿಂಗಯ್ಯ ,ನಂದಿಶ್, ಗೌಡಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಹಾಗೂ ವಡಗೆರೆ ಗ್ರಾಮದ ಗ್ರಾಮಸ್ಥರು,ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ