ಅನ್ನದಾಸೋಹ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ
ದೊಡ್ಡಬಳ್ಳಾಪುರ:ಅನ್ನದಾಸೋಹ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ
ದೊಡ್ಡಬಳ್ಳಾಪುರ : ಶ್ರೀಮತಿ ಕಾಂತಾಮಣಿ ಹರೀಶ್ ಗೌಡ ಮಹಿಳಾ ಬಳಗದ ವತಿಯಿಂದ ನಿರಂತರ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ಚಿತ್ರ ನಟ ಡಾ. ಪುನೀತ್ ರಾಜಕುಮಾರ್ ಸ್ಮರಣಾಥವಾಗಿ ವಯೋವೃದ್ಧರಿಗೆ, ಕಡುಬಡವರಿಗೆ ಆಹಾರ ವಿತರಣೆ ಮಾಡಲಾಯಿತು.
ಗಾಯಕಿ ಮುನಿರತ್ನ ಮಾತನಾಡಿ ಹೆಸರಂತ ಚಿತ್ರನಟ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರ ಸೇವ ಮನೋಭಾವಕ್ಕೆ ಮಾದರಿಯಾಗಿದ್ದಾರೆ, ತಮ್ಮ ಸೇವೆಗಳಿಂದಲೇ ಪರಮಾತ್ಮ ಎಂದು ಕರೆಸಿಕೊಳ್ಳುವ ಮಹಾನ್ ವ್ಯಕ್ತಿಯಾಗಿದ್ದಾರೆ, ಅವರ ಪುಣ್ಯ ಸ್ಮರಣೆಯಂದು ಮಲ್ಲೇಶ್ ರವರ ಸಹಕಾರದೊಂದಿಗೆ ವೃದ್ಧರಿಗೆ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಸೇವೆಯಲ್ಲಿ ತೊಡಗಿರುವುದು ಸಂತಸ ತಂದಿದೆ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.
ನಿರಂತರ ಅನ್ನದಾಸೋಹ ಸಮಿತಿಯ ಮಲ್ಲೇಶ್ ಮಾತನಾಡಿ ನಿರಂತರವಾಗಿ ವೃದ್ಧರಿಗೆ ಕಡುಬಡವರಿಗೆ ಹಸಿದವರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ನಿರಂತರ ಅನ್ನದಾಸೋಹ ನಡೆಸಲು ಪುನೀತ್ ರಾಜಕುಮಾರ್ ಅವರ ಸೇವಾಕಾರ್ಯವೇ ಸ್ಫೂರ್ತಿಎಂದರೇ ತಪ್ಪಾಗಲಾರದು. ಇಂದು ನಮ್ಮೊಂದಿಗೆ ಸೇರಿ ಹಸಿದವರಿಗೆ ಆಹಾರ ನೀಡಿರುವ ಗಾಯಕಿ ಮುನಿರತ್ನ ಮತ್ತು ತಂಡಕ್ಕೆ ಶುಭವಾಗಲಿ ಎಂದರು
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಗೌರಮ್ಮ,ಲಕ್ಷ್ಮಿ ರಘುನಾಥಪುರ , ಕವಿತಾ ದೊಡ್ಡಬಳ್ಳಾಪುರ, ಲಕ್ಷ್ಮಮ್ಮ ದೊಡ್ಡಬಳ್ಳಾಪುರ ಸೇರಿದಂತೆ ಶ್ರೀಮತಿ ಕಾಂತಾಮಣಿ ಹರೀಶ್ ಗೌಡ ಮಹಿಳಾ ಬಳಗದ ಸದಸ್ಯರು ಉಪಸ್ಥಿತರಿದ್ದರು.