ಎ. ಐ. ಬಿ. ಎಸ್. ಪಿ ಕಚೇರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ
ದೊಡ್ಡಬಳ್ಳಾಪುರ:ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ವನ್ನು
ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಛೇರಿಯಲ್ಲಿ ಆಚರಣೆ ಮಾಡಲಾಯಿತು.
ನಗರದ ತಾಲ್ಲೂಕ್ ಕಛೇರಿಯ ವೃತ್ತದಲ್ಲಿರುವ ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ
ತಾಲ್ಲುಕು ಅಧ್ಯಕ್ಷ ನಂಜೇಶ್ ಮಾತನಾಡಿ ಬಸವಣ್ಣ 12ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ ಮಾದರಸ,ತಾಯಿ ಮಾದಲಂಬಿಕೆ ಎಂಬುವರ ಪುತ್ರನಾಗಿ ಜನಿಸಿದರು ಸಾಮಾಜಿಕ ಸುಧಾರಕ ರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿ ಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಜಾತಿ ಭೇದಗಳನ್ನು ತೊರೆದು ಮಾನವರೆಲ್ಲಾರು ಒಂದೆ ಎಂಬ ಸಂದೇಶವನ್ನು ಸಾರಿದರು ಅವರು ಅನುಭವ ಮಂಟಪದ ಆಧ್ಯಾತ್ಮಿಕ ಅನುಭವದಲ್ಲಿ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಎಂದರು
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಜ ಕುಮಾರ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ದಾಳಪ್ಪ ಕಾರ್ಯದರ್ಶಿ ವೆಂಕಟೇಶ್ ಮುನಿಯಪ್ಪ ಶ್ರೀನಿವಾಸ್ ಜಯಣ್ಣ ಹಾಜರಿದ್ದರು.