ಬಸವಣ್ಣನವರ ಚಿಂತನೆಗಳು ಸರ್ವ ಕಾಲಕ್ಕೂ ಮಾದರಿ– ಸೋಮಶೇಖರ್

ದೊಡ್ಡಬಳ್ಳಾಪುರ:ತಾಲ್ಲೂಕಿನ ತೂಬಗೆರೆ ಯಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ನಿವಾರಿಸುವ ಕಡೆಗೆ ಬಸವಣ್ಣನವರು ಮೊದಲ ಆದ್ಯತೆಯನ್ನು ನೀಡಿ, ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ಕಟ್ಟುವ ಬಸವಣ್ಣನವರ ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ ಎಂದು ದೇವಾಲಯದ ಮಂಡಳಿಯ ಸದಸ್ಯ ಟಿ. ಪಿ. ಸೋಮಶೇಖರ್ ಹೇಳಿದರು,

ತೂಬಗೆರೆಯಲ್ಲಿ 200 ವರ್ಷಗಳಿರುವ ಇತಿಹಾಸ ಹೊಂದಿರುವ ಬಸವಣ್ಣ ದೇವಾಲಯದಲ್ಲಿ ಇಂದು ಬಸವಣ್ಣ ಜಯಂತಿಯನ್ನು ಅದ್ದೂರಿಯಾಗಿ ನೆರವೇರಿಸಿದರು, ಬೆಳಗಿನಿಂದಲೇ ವಿಶೇಷ ಪೂಜೆಗಳನ್ನು ಸಲ್ಲಿಸಿ , ಹೆಸರು ಬೆಳೆ, ಪಾನಕ ಮಜ್ಜಿಗೆಯನ್ನು ವಿತರಣೆ ಮಾಡಿದರು,

ಇನ್ನು ಸಂಜೆ ಹೂವಿನ ಪಲ್ಲಕ್ಕಿ ರಥೋತ್ಸವದಲ್ಲಿ ಬಸವಣ್ಣವರ ವಿಗ್ರಹವನ್ನು ಮೆರವಣಿಗೆ ಮಾಡಲಾಗುತ್ತದೆ ಹಾಗೂ ವೀರಗಾಸೆ, ಡೊಳ್ಳು ಕುಣಿತ ಇನ್ನೂ ಅನೇಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ,

ಟಿ. ಪಿ.ಸೋಮಶೇಖರ್ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ವಚನ ಸಾಹಿತ್ಯವಾಗಿದೆ. ಬಸವಣ್ಣ ಅವರ ನೇತೃತ್ವದಲ್ಲಿ ವಚನಕಾರರು ತಮ್ಮ‌ ವಚನಗಳಲ್ಲಿ ಸಾಮಾಜಿಕ, ಹಾಗೂ ತಾತ್ವಿಕ ಮೌಲ್ಯಗಳನ್ನು ಪ್ರತಿಪಾದಿಸಿದರು. ವಿಶ್ವ ಮಾನವತೆ ಮತ್ತು ವಿಶ್ವ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ಹೇಳಿದರು,

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ಬದ್ರಿನಾಥ್, ದೇವಾಲಯದ ಅರ್ಚಕ ಸದಾನಂದ ಹಾಗು ಊರಿನ ಮುಖಂಡರುಗಳು ಹಾಜರಿದ್ದರು.