ಸಂಭ್ರಮದ ಸಪ್ತ ಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ಸಂಪನ್ನ

ದೊಡ್ಡಬಳ್ಳಾಪುರ: ನಗರದ ವನ್ನಿಗರ ಪೇಟೆಯಲ್ಲಿನ ಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ಹೂವಿನ ಕರಗ ಮಹೋತ್ಸವ
ವಿಜೃಂಭಣೆಯಿಂದನೆರವೇರಿತು.ಬುದ್ಧಪೂರ್ಣಿಮೆಯಂದು ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ದೇವಾಲಯದಿಂದ ಹೊರ ಬಂದ ಕರಗ ಊರಿನ ಪ್ರಮುಖ ಬೀದಿಗಳಲ್ಲಿ ಸಂಚ
ರಿಸಿ ಮಂಗಳವಾರ ದೇವಾಲಯಕ್ಕೆ ಮರಳಿತು.

ಸರ್ವಾಭರಣಗಳಿಂದ ಅಲಂಕೃತವಾಗಿದ್ದ ಕರಗವನ್ನು ಹೊತ್ತ ಪೂಜಾರಿ ಮುನಿರತ್ನಂ ಬಾಲಾಜಿ, ನೃತ್ಯ ಮಾಡುತ್ತಾ ಸಂಚರಿಸಿದರು. ತಮಟೆ ಹಾಗೂ ನಾದಸ್ವರ ವಾದನದ ಸದ್ದಿಗೆ ಪೂರಕವಾಗಿ ಹೆಜ್ಜೆ ಹಾಕುತ್ತಾ ಭಕ್ತಾದಿಗಳ ಮನಸೂರೆಗೊಂಡರು. ವಹ್ನಿಗರ ಪೇಟೆಯಲ್ಲಿರುವ ಸಪ್ತಮಾತೃಕೆ ಮಾರಿಯಮ್ಮ ದೇವಾಲಯದಿಂದ ಹೊರಟ ಕರಗ, ನಾಗರಕೆರೆ ಬಳಿಯನಾರಾಯಣ ದೇಗುಲ, ಏಳುಸುತ್ತಿನ ಕೋಟೆ, ಪಿಳ್ಳೇಕಮ್ಮ ದೇಗುಲ, ಶ್ರೀ ಧರ್ಮರಾಯಸ್ವಾಮಿ ನೆಲದಾಂಜನೇಯಸ್ವಾಮಿ ದೇವಾಲಯ, ಶ್ರೀ ದೇವಾಲಯಗಳಿಗೆ ಭೇಟಿ ನೀಡಿ ಬಸ್‌ ನಿಲ್ದಾಣ ಬಳಿ ಟಿ.ಸಿದ್ದಲಿಂಗಯ್ಯ ವೃತ್ತದಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಎತ್ತರದ ವೇದಿಕೆಯಲ್ಲಿ ಸುಮಾರು ಅರ್ಧಗಂಟೆ ಕಾಲ ಆಕರ್ಷಕ ಕರಗ ನೃತ್ಯ ನಡೆಯಿತು., ರಂಗಪ್ಪ ವೃತ್ತ, ಮುತ್ಯಾಲಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯ ಹಾಗೂ ವೃತ್ತಗಳಲ್ಲಿ ಕರಗ ನೃತ್ಯ ಗಮನ ಸೆಳೆಯಿತು.

14 ವರ್ಷಗಳಿಂದ ಚಿಕ್ಕಬಳ್ಳಾಪುರ. ಬಾಗೇಪಲ್ಲಿ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡುನಲ್ಲಿ ಯೂ ಕರಗ ಹೊತ್ತಿರುವ ಆಂಧ್ರಪ್ರದೇಶದ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ, 5ನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊತ್ತಿದ್ದರು. ಕರಗ ಅಂಗವಾಗಿ ನಗರದ ವಿವಿಧೆಡೆ ಪೂಜೆ ಪ್ರಸಾದ ವಿನಿಯೋಗ ನಡೆಯಿತು.

ಕರಗ ಮಹೋತ್ಸವ ಹಿನ್ನೆಲೆ ದೇವಾಲಯ ದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು.
ಮೇ 14 ರಂದು ಸಂಜೆ 4 ಘಂಟೆಗೆ ಒನಕೆ ನಾಟ್ಯ ಮತ್ತು ವಸಂತೋತ್ಸವ ನಡೆಯಿತು.

ನಗರದ ವಿವಿಧ ವೃತ್ತಗಳಲ್ಲಿ ಕಲಾವಿದ ರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕೃತ ಬೃಹತ್ ಕಟೌಟ್ ಗಳು ಕರಗದ ಸಂಭ್ರಮಕ್ಕೆ ಮೆರುಗು ತಂದಿತ್ತು