ರಾಷ್ಟ್ರಕಂಡ ಧೀಮಂತ ನಾಯಕ ಎಚ್ ಡಿ. ದೇವೇ ಗೌಡರ ದೇಶಕ್ಕೆ ಅವರ ಕೊಡುಗೆ ಅಪಾರ : ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ಕರ್ನಾಟಕದ ಅಪ್ಪಟ ಕನ್ನಡದ ಕಟ್ಟಾಳು ಹಾಗೂ ರಾಷ್ಟ್ರ ಕಂಡ ಧೀಮಂತ ನಾಯಕರು ನೀರಾ ವರಿ ಹೋರಾಟದಲ್ಲಿ ಯಶಸ್ಸು ಕಂಡ ಅಪ್ರತಿಮ ಜನ ನಾಯಕರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅಭಿನಂದಿಸಿದ ಬಳಿಕ ಮಾತನಾಡಿ, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಅಪ್ಪಾಜಿ ಅವರ ಆಶಯದಂತೆ ಸರಳವಾಗಿ, ಅರ್ಥಪೂರ್ಣ ವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಲಾಗಿದೆ. ರೈತ ನಾಯಕ ಅವರ ಸಾಧನೆಯನ್ನು ಕರ್ನಾಟಕವೇ ಮೆಚ್ಚುವಂಥದ್ದು. ಜೆಡಿಎಸ್ ಪಕ್ಷದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.

ತಾಲೂಕು ಸೊಸೈಟಿ ಅಧ್ಯಕ್ಷ ಬೂದಿಗೆರೆ ಮುನಿರಾಜು ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಬೆಂಬಲಕ್ಕೆ ನಾವು ಸದಾ ಕೃತಜ್ಞರಾಗಿರುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸುವ ಅವಕಾಶ ನಮಗೆ ದೊರೆಯಲಿ ಎಂದು ಆಶಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬಿದಲೂರು ವಿ.ಎಸ್.ಎಸ್.ಎನ್ ಅಧ್ಯಕ್ಷರಾದ ಕೆ.ವಿ ಮಂಜುನಾಥ್, ಪುರಸಭಾ ಉಪಾಧ್ಯಕ್ಷರಾದ ಜಿ.ಎ ರವೀಂದ್ರ, ಬಮೂಲ್ ನಿರ್ದೇಶಕರಾದ ಶ್ರೀನಿವಾಸ್, ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಲ್ಯಾಣ ಕುಮಾರ್ ಬಾಬು, ಯುವ ಘಟಕದ ಅಧ್ಯಕ್ಷರಾದ ಟಿ.ರವಿ, ತಾಲ್ಲೂಕು ಸೊಸೈಟಿ ಅಧ್ಯಕ್ಷರಾದ ಮುನಿರಾಜ್, ಮುಖಂಡರಾದ ಜೊನ್ನಹಳ್ಳಿ ಮುನಿರಾಜ್, ಟೌನ್ ಅಧ್ಯಕ್ಷರಾದ ಮುನಿನಂಜಪ್ಪ, ನಾಗೇಶ್, ಸಾಯಿಕುಮಾರ್ ಬಾಬು, ಶ್ರೀನಿವಾಸ್, ನಟರಾಜ್, ಶ್ರೀನಾಥ್, ಮಾರೇಗೌಡ, ಭರತ್, ವಿಜಯ್ ಕುಮಾರ್, ಮಹೇಶ್, ಅನಿಲ್ ಒಣಗೊಂಡಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.