ಶ್ರೀಮದ್ ರಂಬಾಪುರಿ ಸ್ವಾಮಿಗಳ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಬಾವೈಕ್ಯ ಧರ್ಮ ಸಮಾರಂಭ
ದೊಡ್ಡಬಳ್ಳಾಪುರ : ಇದೆ ಮೇ ತಿಂಗಳ 25ರಂದು ಇಷ್ಟಲಿಂಗ ಮಹಾಪೂಜೆ ಹಾಗೂ ಭಾವೈಕ್ಯ ಧರ್ಮಸಮಾರಂಭವನ್ನು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದುತಾಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್ ನಾಗಸಂದ್ರ ತಿಳಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ (ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ) ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 25ರಂದು ಬೆಳಗ್ಗೆ 7-00 ಗಂಟೆಗೆ ಗುರುವರ್ಯರಿಂದ ಶಿವಧೀಕ್ಷೆ ನೀಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಪೂರ್ಣ ಕುಂಭ ಸಹಿತ ಮಂಗಳವಾದ್ಯಗಳೊಂದಿಗೆ ನಗರದ ಸೋಮೇಶ್ವರ ದೇವಾಲಯದಿಂದ ಪಾದಯಾತ್ರೆ ಮೂಲಕ ರಂಭಾಪುರಿ ಜಗದ್ಗುರುಗಳು ಬಸವ ಭವನಕ್ಕೆ ಆಗಮಿಸಲಿದ್ದಾರೆ, ಬೆಳಿಗ್ಗೆ 9 ಗಂಟೆಗೆ ಇಷ್ಟಲಿಂಗ ಮಹಾಪೂಜೆ ಪ್ರಾರಂಭವಾಗಲಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಸುಜಯ್ ಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಸಾಮೂಹಿಕ ಶಿವಧೀಕ್ಷೆ, ಇಷ್ಟಲಿಂಗ ಮಹಾಪೂಜೆ ಜೊತೆಗೆ ಭಾವೈಕ್ಯ ಧರ್ಮ ಸಮಾರಂಭ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಬಾಳೆ ಹೊನ್ನೂರು ಮಠದ ಶ್ರೀ ಷ.ಬ್ರ.ರೇಣುಕ ಶಿವಾಚಾರ್ಯ ಸ್ವಾಮಿಗಳು, ಷ. ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಬಿ. ಈಶ್ವರಖಂಡ್ರೆ, ಭಾರತೀಯ ಜನತಾ ಪಾರ್ಟಿ,ರಾಜ್ಯಾಧ್ಯಕ್ಷರಾದ
ಬಿ.ವೈ. ವಿಜಯೇಂದ್ರ,ಸಂಸದರಾದ ಡಾ. ಕೆ. ಸುಧಾಕರ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಆದ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ವಿಶೇಷ ಸೂಚನೆ : ತಾಲ್ಲೂಕಿನ ಜನತೆ ಗುರುವರ್ಯರಿಂದ ಶಿವಧೀಕ್ಷೆ ಪಡೆಯಲು ಇಚ್ಛಿಸುವವರು ಮೋಹನ್ ಕುಮಾರ್ : 9242042361 ಹಾಗೂ ಸುಜಯ್ ಕುಮಾರ್ : 9686456222 ರವರನ್ನು ಸಂಪರ್ಕಿಸಲು ಕೋರಿದೆ
ಸುದ್ದಿಗೊಷ್ಟಿಯಲ್ಲಿಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಗ್ರಾಮಾಂತರ ಯುವ ಘಟಕ ಜಿಲ್ಲಾಧ್ಯಕ್ಷ ಲೋಕೇಶ್ ನಾಗಸಂದ್ರ, ಜಿಲ್ಲಾ ನಿರ್ದೇಶಕರಾದ ಪ್ರಭಾಕರ್,ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಸುಜಯ್ ಕುಮಾರ್ , ಖಜಾಂಚಿ ವೀರಣ್ಣ,ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.