ಕೆಪಿಎಸ್ ಶಾಲೆಯಲ್ಲಿ ಎಲ್.ಕೆ. ಜಿ ಪ್ರವೇಶಕ್ಕೆ ನೂಕು ನುಗ್ಗಲು ಮುಂಜಾನೆ 4ಗಂಟೆಗೆ ಎದ್ದು ಸರತಿಯ ಸಾಲಿನಲ್ಲಿ ನಿಂತು ಅರ್ಜಿ ಪಡೆಯಲು ಮುಂದಾದ ಪೋಷಕರು
ಕೃಷ್ಣರಾಜಪೇಟೆ:ಮಂಡ್ಯ ಜಿಲ್ಲೆಯಲ್ಲಿಯೇ ಮಾದರಿ ಸರ್ಕಾರಿ ಶಾಲೆಯಾಗಿ ಹೊರಹೊಮ್ಮಿರುವ ಕೃಷ್ಣರಾಜಪೇಟೆ ತಾಲೂಕಿನ ಪ್ರತಿಷ್ಟಿತ ಸರ್ಕಾರಿ ಶಾಲೆಯಾಗಿ ಹೊರಹೊಮ್ಮಿರುವ ಕೆಪಿಎಸ್ ಶಾಲೆಯಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಎರಡೂವರೆ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಂದಿಗೂ ಶಾಲೆಯಲ್ಲಿ ಪ್ರವೇಶ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ ಎಂದು ತಿಳಿಸಿದ ಪೋಷಕರು ಎಲ್.ಕೆ.ಜಿ ಪ್ರವೇಶಕ್ಕೆ ಕೇವಲ 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಎಲ್ಲಾ ಮಕ್ಕಳಿಗೆ ಶಾಲೆಗೆ ಪ್ರವೇಶ ದೊರೆಯುತ್ತಿಲ್ಲ ಆದ್ದರಿಂದ ಕನಿಷ್ಠ 150 ವಿದ್ಯಾರ್ಥಿಗಳಿಗಾದರೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪೋಷಕರು ಪ್ರಾಂಶುಪಾಲ ಡಿ. ಬಿ.ಸತ್ಯ ಅವರಲ್ಲಿ ಮನವಿ ಮಾಡಿದರು._
_ಕಾಲೇಜಿನ ಪ್ರಾಂಶುಪಾಲ ಡಿ. ಬಿ.ಸತ್ಯ ಮಾತನಾಡಿ ಕೆಪಿಎಸ್ ಶಾಲೆಯು ಗುಣ ಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಯಾಗಿರುವುದರಿಂದ ಕೆಪಿಎಸ್ ಶಾಲೆಯಲ್ಲಿ ಪ್ರವೇಶ ಪಡೆಯಲು ಇಂದಿಗೂ ಭಾರೀ ಒತ್ತಡವಿದೆ. ನಮ್ಮ ಸರ್ಕಾರಿ ಶಾಲೆಯ ಮೇಲೆ ಪೋಷಕರು ಇಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ತಾವು ಕೃತಜ್ಞತೆ ಸಮರ್ಪಿಸುವುದಾಗಿ ತಿಳಿಸಿದರು._
_ಈ ಸಂದರ್ಭದಲ್ಲಿ ರೈತ ಮುಖಂಡ ಮರುವನಹಳ್ಳಿ ಶಂಕರ್, ಮುಖಂಡರಾದ ಟಿ. ವೈ.ಆನಂದ್, ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು._
*_ವರದಿ ಸಾಯಿಕುಮಾರ್. ಎನ್.ಕೆ,_*