*_ಲಾಯರ್ ಜಗದೀಶ್ – ಗಿರೀಶ್ ಮಟ್ಟಣ್ಣವರ್ ರವರಿಗೆ ಎಚ್ಚರಿಕೆ ನೀಡಿದ ಕನ್ನಡಪರ ಸಂಘಟನೆಗಳು
ಕೃಷ್ಣರಾಜಪೇಟೆ:ಪಟ್ಟಣದ ಬಿಜಿಎಸ್ ಕಾಂಪ್ಲೆಕ್ಸ್ ನಲ್ಲಿರುವ ಮಾಧ್ಯಮ ಸ್ಟುಡಿಯೋ ಕಛೇರಿಯಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗೋವಿಂದರಾಜು ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲೋಕು ಅಧ್ಯಕ್ಷರಾದ ಜಾವೀದ್,ನಾಗಲಕ್ಷ್ಮೀ ಚೌಧರಿ ಅಬಿಮಾನ ಬಳಗದ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸೋಮಶೇಖರ್ ಲಾಯರ್ ಜಗದೀಶ್ ರವರು ವಕೀಲರಾಗಿದ್ದು ನಾಗಲಕ್ಷ್ಮೀ ಚೌಧರಿ ರವರಿಗೆ ರಾಜೀನಾಮೆ ನೀಡುವಂತೆ ಹೇಳಿರುವುದು ನಿಮಗೆ ನೈತಿಕ ಹಕ್ಕಿಲ್ಲ, ನಾಗಲಕ್ಷ್ಮೀ ಚೌಧರಿ ಅಭಿಮಾನಿಯಾದ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕದಾದ್ಯಂತ ಅಪಾರವಾದ ಅಭಿಮಾನಿಗಳು ಇದ್ದಾರೆ, ನಾಗಲಕ್ಷ್ಮೀ ಚೌಧರಿ ರವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದ್ದು ಇವರು ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಕರ್ನಾಟಕದ ಪ್ರತಿಯೊಂದು ಹಳ್ಳಿ-ಹಳ್ಳಿಗಳಿಗೂ ಭೇಟಿ ಮಾಡಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಮಹಿಳೆಯರ ಬಗ್ಗೆ ನಿಮಗಿರುವ ಕಾಳಜಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಡೀ ಕರ್ನಾಟಕದ ಜನತೆಗೆ ತಿಳಿದಿದೆ ನಾಗಲಕ್ಷ್ಮೀ ಚೌಧರಿ ರವರಿಗೆ ಕ್ಷಮೆ ಯಾಚನೆ ಮಾಡಬೇಕೆಂದು ಲಾಯರ್ ಜಗದೀಶ್ ಗೆ ಎಚ್ಚರಿಕೆ ನೀಡಿದರು,
*_ಗಿರೀಶ್ ಮಟ್ಟಣ್ಣವರ್ ಹೇಳಿಕೆಗೆ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ತೀರುಗೇಟು:_*
_ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ರವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಧ್ವನಿ ಎತ್ತದೇ ಕೆಲಸಕ್ಕೆ ಬರೀ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಗೆ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿ ಮಾಜಿ ಪಿ.ಎಸ್.ಐ ಗಿರೀಶ್ ಮಟ್ಟಣ್ಣವರ್ ರವರು ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ನಮಗೂ ನಿಮ್ಮ ಮೇಲೆ ಗೌರವವಿದೆ ಸೌಜನ್ಯ ಪ್ರಕರಣ ಸಿಬಿಐಗೆ ಒಪ್ಪಿಸಿದ್ದು ಅಲ್ಲದೆ ಸುಪ್ರೀಂಕೋರ್ಟ್ ಅಂಗಳದಲ್ಲಿ ಇರುವುದು ನಿಮ್ಮ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಸೌಜನ್ಯ ಪ್ರಕರಣದಲ್ಲಿ ನಾವು ಸಹ ಬೆಂಬಲ ನೀಡುತ್ತೇವೆ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬೇಡಿ ಎಂದು ತೀರುಗೇಟು ನೀಡಿದರು,_
_ಈ ಪತ್ರಿಕಾಗೋಷ್ಠಿಯಲ್ಲಿ ನಾಗಲಕ್ಷ್ಮೀ ಚೌಧರಿ ಆಭಿಮಾನಿಯಾದ ಸೋಮಶೇಖರ್, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಜಾವೀದ್,ಲೀಲಾವತಿ,ನಿಸಾರ್, ದೇವಿರಮ್ಮ, ಪುರುಷೋತ್ತಮ್ ಉಪಸ್ಥಿತರಿದ್ದರು
*_ವರದಿದಿ: ಸಾಯಿಕುಮಾರ್. ಎನ್.ಕೆ