ತೂಬಗೆರೆ ಯಲ್ಲಿ ಉಚಿತ ಅರೋಗ್ಯ ಶಿಬಿರ
ದೊಡ್ಡಬಳ್ಳಾಪುರ:ಮನುಷ್ಯನಿಗೆ ಒಂದಲ್ಲ ಒಂದು ಕಾಯಿಲೆ ಇದ್ದೇ ಇರುತ್ತದೆ ಅದರಲ್ಲೂ ಕೆಲವರು ಬಡವರು ಇರುತ್ತದೆ ಇನ್ನೂ ಕೆಲವರು ಶ್ರೀಮಂತರಾಗಿರುತ್ತಾರೆ ಆದರೆ ಬಡವರ ಕೈಯಲ್ಲಿ ಹಣ ಇರುವುದಿಲ್ಲ, ಯಾವುದಾದರೂ ಒಂದು ಕಾಯಿಲೆ ಬಂದರೆ ಹೆಚ್ಚಿನ ಚಿಕಿತ್ಸೆಗೆ ಹಣ ಇರುವುದಿಲ್ಲ ಆದ್ದರಿಂದಲೇ ಕೆಲವು ಆಸ್ಪತ್ರೆಗಳು ಉಚಿತ ಕ್ಯಾಂಪುಗಳನ್ನು ಹಾಕಿಕೊಂಡು ಬಡವರಿಗೆ ಒಳ್ಳೆ ಸೌಲಭ್ಯ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜ್ ಹೇಳಿದರು,
ಹೆಸರಘಟ್ಟ ಸಪ್ತಗಿರಿ ಆಸ್ಪತ್ರೆ ವತಿಯಿಂದ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸಮುದಾಯ ಭವನ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಬಾನುವಾರ ಹಮ್ಮಿಕೊಳ್ಳಲಾಗಿತ್ತು,
ಗ್ರಾಮೀಣ ಪ್ರದೇಶ ಜನರಿಗೆ ಉಚಿತವಾಗಿ ಆರೋಗ್ಯ ಶಿಬಿರ ಕೊಡುತ್ತಿರುವುದು ಸಪ್ತಗಿರಿಯ ಆಸ್ಪತ್ರೆಯವರಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸಿ , ಇಂಥ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲಿ ಆದರೆ ಜನರಿಗೆ ಒಳ್ಳೆಯದು, ದೂರ ದೂರ ಆಸ್ಪತ್ರೆಗಳಿಗೆ ಹೋಗಲು ತಪ್ಪಿಸಬಹುದು ಎಂದು ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜ್ ಹೇಳಿದರು,
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್. ಅರವಿಂದ್ ಮಾತನಾಡಿ, ಪ್ರತಿಯೊಂದು ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ , ಮಾತ್ರೆಗಳು ಕೂಡ ಉಚಿತವಾಗಿ ನೀಡಲಾಗುತ್ತಿದೆ ಸಪ್ತಗಿರಿ ಆಸ್ಪತ್ರೆಯವರು ಇದು ಮಾಡಿರುವುದು ಒಳ್ಳೆಯ ಕೆಲಸವಾಗಿದೆ, ಈ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮವನ್ನು ಮಾಡಬೇಕಿದೆ ಎಂದು ಹೇಳಿದರು,
ಹೃದೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ, ಕಿವಿ ಮೂಗು, ಗಂಟಲು ಸಮಸ್ಯೆ, ಮೂಳೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ತಪಾಸಣೆ ನಡೆಯಿತು,
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿ ಲಕ್ಷ್ಮಮ್ಮ ರಾಮಕೃಷ್ಣ, ಮಾಜಿ ಅಧ್ಯಕ್ಷ ವೆಂಕಟೇಶ್, ಡಾ.ಶಿವಶಂಕರ್, ಕಾರ್ಯಕ್ರಮದ ಆಯೋಜಕರಾದ ಎಸ್. ಪಿ.ರವಿಶಂಕರ್, ವಿಕಾಸ್ ಹಾಗು ಸಪ್ತಗಿರಿ ಆಸ್ಪತ್ರೆಯ ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು,