ಬಹುಜನ ಸಮಾಜ ಪಕ್ಷವನ್ನು ಬಲ ಪಡಿಸುವ ಉದ್ದೇಶದಿಂದ ಕಾರ್ಯಕರ್ತರ ಕಾರ್ಯಾಗಾರ–ಹೆಚ್. ನರಸಿಂಹಯ್ಯ
ದೊಡ್ಡಬಳ್ಳಾಪುರ : ಪಕ್ಷ ಬಲವರ್ಧನೆಗೊಳಿಸುವ ಮೂಲಕ ಜನರ ಮನೆ, ಮನಸ್ಸು, ಮತಗಳನ್ನು ಪರಿವರ್ತನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಲು ಇಂದಿನಿಂದ ತಯಾರಿ ಮಾಡಲಾಗುತ್ತಿದೆ ಎಂದು ಬಹುಜರ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಾರ್ಯಗಾರ ನಡೆಸಿದ್ದೇವೆ, ಈ ಕಾರ್ಯಕ್ರಮದಲ್ಲಿ ನಾಲ್ಕು ತಾಲೂಕಿನ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದಾರೆ, ಇಂದು 17 ಹೋಬಳಿಗಳ 101 ಗ್ರಾಮ ಪಂಚಾಯಿತಿಯ ಕಾರ್ಯಕರ್ತರಿಗೆ ಪಕ್ಷದ ಮಾನಸೂಚಿಗಳನ್ನು ನೀಡಲಾಗಿದೆ . ಜೂನ್ 22ರಂದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ಕಾರ್ಯಗಾರ ಏರ್ಪಡಿಸಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ಪ್ರಸ್ತುತ ತಾಲೂಕು ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೇವಾ ಸೌಲಭ್ಯಗಳು ಸೂಕ್ತ ರೀತಿ ದೊರೆಯುತ್ತಿಲ್ಲ , ಅಧಿಕಾರಿಗಳು ರಾಜಕಾರಣಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸೇವೆ ಮಾಡುವುದನ್ನು ಮರೆತಿದ್ದಾರೆ ಅಧಿಕಾರಿಗಳ ಈ ವರ್ತನೆಯನ್ನು ಬಹುಜನ ಸಮಾಜ ಪಕ್ಷವು ಸಾರ್ವಜನಿಕವಾಗಿ ಖಂಡಿಸುತ್ತದೆ ಎಂದರು.
ಬಿ ಎಸ್ ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದಲ್ಲಿ ಶೋಷಿತ ಸಮುದಾಯಗಳಿಗೆ ತಲುಪುತ್ತಿಲ್ಲ, ವೇದಿಕೆ ಮೇಲೆ ಭಾಷಣ ಮಾಡುವ ರಾಜಕೀಯ ನಾಯಕರು ಶೋಷಿತ ಸಮುದಾಯಗಳನ್ನು ಮರೆಯುವುದು ವಿಪರ್ಯಾಸವೇ ಸರಿ, ಸಮಾಜದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ, ಮತಗಳನ್ನು ಪಡೆಯುವಾಗ ಕೊಡುವ ಭರವಸೆಗಳನ್ನು ರಾಜಕಾರಣಿಗಳು ಬೇಗನೆ ಮರೆಯುತ್ತಾರೆ ಮತಗಳ ಬೆಲೆ ಏನೆಂಬುದು ಅವರಿಗೆ ಅರಿವಿಲ್ಲ ಮತದಾನದ ವಿಶೇಷತೆ ಮತ್ತು ಅದರ ಶಕ್ತಿ ಕುರಿತಾಗಿ ಬಹುಜನ ಸಮಾಜ ಪಕ್ಷವು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಪ್ರತಿ ಮತದಾರರಿಗೂ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಿದೆ ಎಂದರು.
ಅಕ್ಕ ಮಾಯಾವತಿಯವರ ಆಶಯದಂತೆ ಸದಾ ಶೋಷಿತರ ಬಲವಾಗಿ ನಿಂತಿರುವ ಬಹುಜನ ಸಮಾಜ ಪಕ್ಷವು ದಲಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಸದಾ ಧ್ವನಿಯಾಗಲಿದೆ, ಅಲ್ಲದೇ ಸ್ಥಳಿಯವಾಗಿ ಯುವ ಸಮುದಾಯ ನಮ್ಮ ಕಾರ್ಯಗಾರಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು .
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಸಿ ಹನುಮಂತ ರಾಯಪ್ಪ, ರಾಜ್ಯ ಕಾರ್ಯದರ್ಶಿ ಬಂಗಾರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷರಾದ ಬಾಲರಾಮಚಂದ್ರ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾದ ಪಿಳ್ಳಪ್ಪ, ನೆಲಮಂಗಲ ತಾಲೂಕು ಅಧ್ಯಕ್ಷ ಮೂರ್ತಿ, ದೇವನಹಳ್ಳಿ ತಾಲೂಕು ಅಧ್ಯಕ್ಷ ಎಂ ಡಿ ರಾಮಾಂಜಿನಪ್ಪ, ದೊಡ್ಡಬಳ್ಳಾಪುರ ತಾಲೂಕು ಉಸ್ತುವಾರಿ ಆರ್ ಸೋಮ, ಹೊಸಕೋಟೆ ತಾಲೂಕು ಉಸ್ತುವಾರಿ ನಾರಾಯಣ ಸ್ವಾಮಿ , ದೇವನಹಳ್ಳಿ ತಾಲೂಕು ಉಸ್ತುವಾರಿ ನಂಜಪ್ಪ, ನೆಲಮಂಗಲ ತಾಲೂಕು ಉಸ್ತುವಾರಿ ಗಂಗಾಧರಪ್ಪ, ಮಹಿಳಾ ಕಾರ್ಯದರ್ಶಿಗಳಾದ ನೆಲಮಂಗಲ ಸೌಭಾಗ್ಯ, ತೂಬಗೆರೆ ನಾಗಮಣಿ, ವಿಜಯಲಕ್ಷ್ಮಿ, ಹೇಮಾವತಿ, ಸುವರ್ಣಮ್ಮ ದೊಡ್ಡಬಳ್ಳಾಪುರ ಸೇರಿದಂತೆ ಹಲವರು ಹಾಜರಿದ್ದರು.