ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಮ್ಶುಪಾಲ ರಾಗಿ ಸೇವೆಯಿಂದ ನಿವೃತ್ತರಾಧ ಆನಂದ ಮೂರ್ತಿ ರವರಿಗೆ ಅಭಿನಂದನಾ ಸಮಾರಂಭ
ದೊಡ್ಡಬಳ್ಳಾಪುರ:ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಆನಂದಮೂರ್ತಿ ರವರು ಇಂದು ತಮ್ಮ ಮೂವತ್ತಾರು ವರ್ಷ ಆರು ತಿಂಗಳ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಸುದೀರ್ಘ ಕಾಲ ಸೇವೆಯನ್ನು ಪೂರೈಸಿ ಇಂದು ಸೇವೆಯಿಂದ ನಿವೃತ್ತರಾದರು ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಂಶುಪಾಲರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎನ್ ಆನಂದಮೂರ್ತಿ ರವರನ್ನು ಅಭಿನಂದಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್ ಮೋಹನ್ ಕುಮಾರ್ ರವರು ಎನ್ ಆನಂದಮೂರ್ತಿ ರವರು ರಾಜ್ಯದ ಪ್ರತಿಷ್ಠಿತ ಅನುದಾನಿತ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಂಶುಪಾಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಾರೆ ಅವರನ್ನು ಅಭಿನಂದಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದರು ಈ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಲಕರ್ಣಿ ಮಾಜಿ ಅಧ್ಯಕ್ಷರುಗಳಾದ ದಯಾನಂದ್ ಸುಬ್ರಹ್ಮಣ್ಯಂ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಿಆರ್ ವೇಣುಗೋಪಾಲ್ ಪ್ರಾಂಶುಪಾಲರ ಸಂಘದ ಸದಸ್ಯರಾದ ಎಂ ಸಿ ಮಂಜುನಾಥ್ ರಂಗನಾಥ್ ಆಂಜಿನಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ನೊಡಲ್ ಅಧಿಕಾರಿಗಳಾದ ಸುನೀತಾ ಹಾಗೂ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು