ಚಾಲಕನ ನಿಯಂತ್ರಣ ತಪ್ಪಿ, ಉರುಳಿ ಬಿದ್ದ ಟಾಟಾ ಏಸ್, ಪ್ರಾಣಾಪಾಯದಿಂದ ಪಾರಾದ ಚಾಲಕ

ವಿಜಯಪುರ: ಗುಜರಿ ಸಾಮಾನುಗಳನ್ನು ತುಂಬಿಸಿಕೊಂಡು, ಶಿಡ್ಲಘಟ್ಟದ ಕಡೆಗೆ ಹೊರಟಿದ್ದ ಟಾಟಾ ಏಸ್, ಚಾಲಕನ ನಿಯಂತ್ರಣ ತಪ್ಪಿ,ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಜಯಪುರದ ಕಡೆಯಿಂದ ಶಿಡ್ಲಘಟ್ಟದ ಕಡೆಗೆ ಸಾಗುತ್ತಿದ್ದ ಟಾಟಾ ಏಸ್ ವಾಹನವನ್ನು ಚಾಲಕ, ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿರುವ ಕಾರಣ, ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಗುಜರಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ವಾಹನದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವಕರು ರಕ್ಷಣೆ ಮಾಡಿ, ಗಾಯಗೊಂಡಿದ್ದ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.