ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಟ್ರೇಡ್ ಯೂನಿಯನ್ ಗೆ ನೂತನ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಗೋವಿಂದರಾಜ್. ಕೆ, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರವಿ ಆಯ್ಕೆ
ಕೃಷ್ಣರಾಜಪೇಟೆ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರ ನಿರ್ಮಾಣ ಟ್ರೇಡ್ ಯೂನಿಯನ್ ನ ರಾಜ್ಯದ್ಯಕ್ಷರಾದ ನಾಗರಾಜ್ ನೂತನ ಜಿಲ್ಲಾಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಗಳಿಗೆ ಆದೇಶ ಪತ್ರ ನೀಡಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವ ಮೂಲಕ ಸಂಘದ ಶ್ರೇಯ ಅಭಿವೃದ್ಧಿ ಕೆಲಸವನ್ನು ಮಾಡುವ ಮೂಲಕ ತಾಲೂಕು ಹೋಬಳಿ ಗ್ರಾಮ ಘಟಕಗಳನ್ನು ರಚನೆ ಮಾಡುವ ಮೂಲಕ ಕಾರ್ಮಿಕರನ್ನು ಸಂಘಟನೆ ಮಾಡಬೇಕು ಎಂದು ತಿಳಿಸಿದರು._
_ನಂತರ ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಟ್ರೇಡ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾದ ಸೋಮಣ್ಣ ರವರು ಮಾತನಾಡಿ ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವ ಮೂಲಕ ಮತ್ತು ಫಲಾನುಭವಿಗಳಿಗೆ ಕಾರ್ಡ್ ಮಾಡಿಸಿಕೊಡುವ ಮೂಲಕ ಅವರಿಗೆ ಸಿಗುವ ಸೌಲಭ್ಯವನ್ನು ನೀಡಿಸುವುದು ಪಿಂಚಣಿ ಸೌಲಭ್ಯ ಮೂರು ವರ್ಷ ಸದಸ್ಯ ತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3000 ಪಿಂಚಣಿ. ಕುಟುಂಬ ಪಿಂಚಣಿ ಸೌಲಭ್ಯ ಮೃತ ಪಿಂಚಿಣಿದಾರರ ಪತ್ನಿ ಪತಿಗೆ ಮಾಸಿಕ ಒಂದು ಸಾವಿರ ರೂ ಪಿಂಚಣಿ. ಟೂಲ್ ಕಿಟ್ ಸೌಲಭ್ಯ 20,000 ತನಕ. ವಸತಿ ಸೌಲಭ್ಯ 2 ಲಕ್ಷ ರೂ ವರೆಗೆ ಮುಂಗಡ ಸಾಲ ಸೌಲಭ್ಯ. ಹೆರಿಗೆ ಸೌಲಭ್ಯ ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ 50,000 ಸಹಾಯಧನ. ಅಂತ್ಯಕ್ರಿಯೆ ವೆಚ್ಚ 4000 ದಿನ. ಶೈಕ್ಷಣಿಕ ಸಹಾಯಧನ 2018 ವರೆಗೆ. ವೈದ್ಯಕೀಯ ಸಹಾಯಧನ 300 ರೂ ನಿಂದ 20 ಅವರಿಗೆ ಸಹಾಯಧನ. ಅಪಘಾತ ಸಹಾಯಧನ ಒಂದು ಲಕ್ಷದಿಂದ 5 ಲಕ್ಷದವರೆಗೆ ಸಹಾಯಧನ. ಮದುವೆಯ ಸಹಾಯಧನ ಫಲಾನುಭವಿಯ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 60,000 ಸಹಾಯಧನ. ಬಸ್ ಪಾಸ್ ಸೌಲಭ್ಯ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ಸೌಲಭ್ಯ. ತಾಯಿ ಮಗು ಸಹಾಯ ಹಸ್ತ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಮಗುವಿಗೆ ಮೂರು ವರ್ಷ ತುಂಬುವ ತನಕ ರೂ.6000 ದನ. ಹೀಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನಮ್ಮ ಸಂಘಟನೆಯ ಮೂಲಕ ಕೊಡಿಸುವ ಮೂಲಕ ಅವರ ಶ್ರೇಯ ಅಭಿವೃದ್ಧಿಗೆ ಸಂಘದ ಎಲ್ಲಾ ಪದಾಧಿಕಾರಿಗಳು ದುಡಿಯುವ ಮೂಲಕ ಉತ್ತಮ ಸೇವೆ ಮಾಡುವುದು ನಮ್ಮ ಸಂಘದ ಉದ್ದೇಶ ಎಂದು ತಿಳಿಸಿದರು._
_ಈ ಸಭೆಯಲ್ಲಿ ಮೇಲ್ಕಂಡ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಆದ ನಾಗರಾಜ್. ರಾಜ್ಯ ಉಪಾಧ್ಯಕ್ಷರಾದ ಶಕುಂತಲಾ. ರಾಜ್ಯ ಸಹ ಖಜಾಂಚಿ ಗಳಾದ ಕೆಸಿ ವಿಷಕಂಠೇಗೌಡ. ರಾಜ್ಯ ಸಂಘಟಿತ ಕಾರ್ಯದರ್ಶಿ ಶಶಿಕಲಾ ಆರ್. ಮಾಣಿಕ್ಯ.ಮೈಸೂರು ಜಿಲ್ಲೆ ಹಾಸನ ಜಿಲ್ಲೆಯ ಕೋಲಾರ ಜಿಲ್ಲೆ ಜಿಲ್ಲಾಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಮಂಡ್ಯ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾದ ಗೋವಿಂದರಾಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರವಿ. ಆದೇಶ ಪತ್ರ ನೀಡಿ ಶುಭ ಹಾರೈಸಿದರು._
ವರದಿ: ಸಾಯಿಕುಮಾರ್. ಎನ್.ಕೆ