ಘಾಟಿ ದೇವಾಲಯದ ಹುಂಡಿಯಲ್ಲಿ 61ಲಕ್ಷ 98ಸಾವಿರದ 741ರೂ ಭಕ್ತರ ಕಾಣಿಕೆ ಸಂಗ್ರಹ

ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಭಕ್ತರು ನೀಡಿದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು.
ದೇವಾಲಯಕ್ಕೆ ಬಂದ ಭಕ್ತರಿಂದ ದೇವಾಲಯದ ನಿಯಮಾನುಸಾರ ಹುಂಡಿಯ ಎಣಿಕೆ ಕಾರ್ಯ ಮಾಡಲಾಗಿದ್ದು ಭಕ್ತರು ನೀಡಿದ ಹುಂಡಿಯಲ್ಲಿ ಒಟ್ಟು 61 ಲಕ್ಷದ 98 ಸಾವಿರದ 741 ರೂಪಾಯಿಗಳ ಮೊತ್ತ ಸಂಗ್ರಹವಾಗಿದೆ.

ದೇವಾಲಯದ ಆವರಣದಲ್ಲಿ ಇಂದು ದೇವಾಲಯದ ಕಾರ್ಯದರ್ಶಿ ಪಿ. ದಿನೇಶ್ ನೇತೃತ್ವದಲ್ಲಿ ಭಕ್ತಾದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಒಟ್ಟು 61,98,741 ರೂಪಾಯಿಗಳು ಮತ್ತು 3.40 ಲಕ್ಷ ಬೆಲೆ ಬಾಳುವ ಬೆಳ್ಳಿ ಹಾಗೂ 80 ಸಾವಿರ ಬೆಲೆ ಬಾಳುವ 11 ಗ್ರಾಂ ಚಿನ್ನ ಸಂಹ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕರು ಶ್ರೀನಿಧಿ, ದೇವಾಲಯದ ನಂಜಪ್ಪ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್. ರಂಗಪ್ಪ, ಎಸ್. ರವಿ ಲಕ್ಷ್ಮ ನಾಯಕ್ ಆರ್. ವಿ. ಮಹೇಶ್ ಕುಮಾರ್ ಶ್ರೀಮತಿ ಹೇಮಲತಾ ರಮೇಶ್ ಪೊಲೀಸ್ ಇಲಾಖೆ ಸಿಬ್ಬಂದಿ ದೇವಾಲಯದ ಸಿಬ್ಬಂದಿ .ಕೆನರಾ ಬ್ಯಾಂಕ್ ಸಿಬ್ಬಂದಿ ಇದ್ದರು.