ಫ. ಗು. ಹಳಕಟ್ಟಿ ವಚನ ಸಾಹಿತ್ಯದ ಹರಿಕಾರ.. ವಿ. ಎಸ್. ಹೆಗ್ಡೆ
ದೊಡ್ಡಬಳ್ಳಾಪುರ: ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಇಡೀ ಜಗತ್ತಿಗೆ ನೀಡಿದ ಕೊಡುಗೆ ಅಪಾರ ಮತ್ತು ಅದ್ಭುತ ಎಂದು ದೊಡ್ಡಬಳ್ಳಾಪುರ ನವೋದಯ ವಿದ್ಯಾಲಯದ ನಿವೃತ್ತ ಕನ್ನಡ ಭಾಷಾ ಪ್ರಾಧ್ಯಾಪಕ ವಿ.ಎಸ್. ಹೆಗಡೆಯವರು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನೋತ್ಸವ ಸಮಾರಂಭದ ಉಪನ್ಯಾಸದಲ್ಲಿ ತಿಳಿಸಿದರು.
ವಚನ ಸಾಹಿತ್ಯ ಎಷ್ಟು ಸರಳವೋ ಅಷ್ಟೇ ಉನ್ನತ ಮಟ್ಟದ ಸಾಹಿತ್ಯವಾಗಿದೆ.ಮನ ಮುಟ್ಟುವಂತೆ ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಚನೆಯಾಗಿರುವ ಈ ಸಾಹಿತ್ಯ ತಾಯಿಯ ಎದೆ ಹಾಲಿನಂತಹ ಅಮೃತಕ್ಕೆ ಸಮಾನವಾಗಿದೆ.ವಚನ ಸಾಹಿತ್ಯ ಅಧ್ಯಯನ ಅಮೃತ ಪಾನ ಮಾಡಿದಷ್ಟು ಅನುಭವ ಹಾಗೂ ಸಂತೃಪ್ತಿ ನೀಡುತ್ತದೆ.ವಚನ ಸಾಹಿತ್ಯ ಇಡೀ ಮನುಕುಲದ ಆಸ್ತಿ.ಇಂತಹ ವಚನ ಸಾಹಿತ್ಯ ಕಲ್ಯಾಣ ಕ್ರಾಂತಿಯ ನಂತರ ನಿಗೂಢವಾಗಿ ಉಳಿದಿದ್ದ ಕಾಲಘಟ್ಟದಲ್ಲಿ ವಚನ ಪಿತಾಮಹ ಎಂದು ಅನ್ವರ್ಥವಾಗಿರುವ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ದಿವ್ಯ ದೃಷ್ಟಿಗೆ ಗೋಚರಿಸುತ್ತದೆ.
ಅಂತರ್ಜಾತಿ ವಿವಾಹದ ಕೋಲಾಹಲ ಕಲ್ಯಾಣ ಕ್ರಾಂತಿಗೆ ಕಾರಣವಾಗಿ ಶರಣ ಸಮೂಹ ಕಲ್ಯಾಣದಿಂದ ದಿಕ್ಕಾಪಾಲಾಗಿ ಹೋದ ಸಂದರ್ಭದಲ್ಲಿ ಅವರು ಬರೆದ ವಚನಗಳೂ ಸಹ ಅವರಲ್ಲಿಯೇ ನಿಗೂಢವಾಗಿ ಉಳಿದಿದ್ದವು. ನಂತರ ಶರಣರು ಎಲ್ಲಿ ನೆಲೆ ಕಂಡಿದ್ದರೋ ಅಲ್ಲಿಗೆಲ್ಲ ಹೋಗಿ ತಮ್ಮಲ್ಲಿ ಸಂರಕ್ಷಣೆ ಮಾಡಿಕೊಂಡಿದ್ದ ವಚನ ಸಾಹಿತ್ಯ ದ ತಾಳೆಗರಿಗಳನ್ನು ಹಣ ಕೊಟ್ಟು ಸಂಗ್ರಹಿಸಿ ಸಂರಕ್ಷಣೆ ಮಾಡಿದ ಸಾಧನೆಯ ಹಿಂದಿನ ಕತೆಯನ್ನು ಸೋದಾಹರಣವಾಗಿ ವಿವರಿಸಿದರು.
ನಂತರವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜಯ್ಯ
ಮಾತನಾಡಿ ಶ್ರೀ ಮಠದಲ್ಲಿ ನಡೆಯುವ ಎಲ್ಲ ರೀತಿಯ ಧಾರ್ಮಿಕ ಶರಣ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಸದ್ಧರ್ಮ ದಾಸೋಹ ಬಸವೇಶ್ವರ ಮಹಾ ಮಠದ ಅಧ್ಯಕ್ಷ ಶ್ರೀಮನ್ ನಿ.ಪ್ರ.ಸ್ವ.ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಅವರು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಪರಿಷ್ಕರಣೆ ಮಾಡಿ ನೂರಾರು ಸಂಪುಟಗಳಲ್ಲಿ ಸಂಗ್ರಹಿಸುವ ಸಾಹಸ ಇಂದಿನ ಸಾಹಿತ್ಯ ಪ್ರಪಂಚದ ಮೈಲಿಗಲ್ಲು ಎಂದು ವರ್ಣಿಸಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.
ಮನುಕುಲದ ಆಸ್ತಿ ಆಗಿರುವ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆಕೊಟ್ಟರು.
ಈ ಕಾರ್ಯಕ್ರಮ ಪ್ರಾಸ್ತಾವಿಕ ನುಡಿಯನ್ನ
ಕೆ.ಮಹಾಲಿಂಗಯ್ಯ ನಿರೂಪಿಸಿದರು
ಈ ಸಂದರ್ಭದಲ್ಲಿ ವೀ.ಶೈ.ಲಿಂ.ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜಯಣ್ಣ .ಮಹಿಳಾ ಘಟಕದ ರೇಣುಕ
ಶರಣ ರುದ್ರೇಶ್ ಶ್ರೀಮತಿ ಲತಾ ಆರಾಧ್ಯ , ತಾಲೂಕಿನ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜಯ್, ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಭವ್ಯ, ನಾರಾಯಣ ಸಿ.ಗಂಗಾಪುರ,ತಿಪ್ಪೇಸ್ವಾಮಿ,ಶಿವರುದ್ರಯ್ಯ,ಮುನಿರಾಜು,ಬಿ.ಟಿ.ತಿಮ್ಮಯ್ಯ,ನೇತ್ರಾವತಿ,ಸುಶೀಲಮ್ಮ, ಆನಂದ್, ರಾಜಶೇಖರ್, ವಿಶ್ವೇಶ್ವರಯ್ಯ, ವೇದಾವತಿ ಮುಂತಾದ ಅನೇಕ ಶರಣ ಶರಣೆಯರು ಹಾಜರಿದ್ದರು.