ಕೊಪ್ಪಳ ಜಿಲ್ಲೆಯಲ್ಲಿ 11,12,13 ರಂದು ಉಚಿತ ಗಾಂಧಿ ಕಾರ್ಯಗಾರ
ಕೊಪ್ಪಳ : ಯುವ ಸಮುದಾಯಕ್ಕೆ ಗಾಂಧಿ ತತ್ವಗಳ ಅರಿವು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಗಾಂಧಿ ಚಿಂತನೆಗಳನ್ನು ಪ್ರಚಾರ ಮಾಡುವ ಯೋಜನೆಗಳ ಬಗ್ಗೆ ಇದೇ ತಿಂಗಳ 11, 12, 13 ರಂದು ಕೊಪ್ಪಳ ಜಿಲ್ಲೆಯ ಬುದ್ಧ ವಿಹಾರದಲ್ಲಿ (ತಾವರೆಗೆರೆ) ಮಾನವ ಬಂಧುತ್ವ ವೇದಿಕೆ ಹಾಗೂ ಕನ್ನಡದ ಜಾಣ ಜಾಣೆಯರು ಯೂಟ್ಯೂಬ್ ಚಾನೆಲ್ ವತಿಯಿಂದ 3 ದಿನಗಳ “ಯುವ ಸಮುದಾಯಕ್ಕಾಗಿ ಗಾಂಧಿ” ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ .
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಗಾಂಧಿ ಚಲನಚಿತ್ರ ಪ್ರದರ್ಶನ, ಸಂವಾದ ,ಸಂದರ್ಶನ ಮತ್ತು ಚಿತ್ರೀಕರಣ ತರಬೇತಿ ನೀಡಲಾಗುವುದು .
ಕಾರ್ಯಗಾರಕ್ಕೆ ಬರುವವರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ.
ನೋಂದಣಿ ಮಾಡಿಕೊಳ್ಳಲು 9008149149 ಈ ಸಂಖ್ಯೆಗೆ ಕರೆ ಮಾಡಿಕೊಳ್ಳಬೇಕೆಂದು ನಿರ್ವಾಹಕರು ತಿಳಿಸಿದ್ದಾರೆ .