ಕೆಂಬಳಿಗಾನಹಳ್ಳಿ ಕೆರೆಯಲ್ಲಿ ಕಯಾಕಿಂಗ್ ಕ್ಲಬ್ ನೂತನ ಶಾಖೆ ಉದ್ಘಾಟನೆ
ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಕೆಂಬಳಿಗಾನಹಳ್ಳಿ ಕೆರೆಯಲ್ಲಿ ನೂತನ ಕಯಾಕಿಂಗ್ ಕ್ಲಬ್ ನ ನೂತನ ಶಾಖೆಯನ್ನು ಹೊಸಕೋಟೆ ತಾಲ್ಲೂಕಿನ ಶಾಸಕರಾದ ಶರತ್ ಬಚ್ಚೇಗೌಡ ರಿಂದ ಉದ್ಘಾಟನೆ ಮಾಡಲಾಯಿತು.
ನಂತರ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ರೀತಿಯ ಕ್ಲಬ್ ಮಾಡುವುದು ಬಹಳ ಸಂತೋಷದ ವಿಷಯ ಮೊದಲಿಗೆ ಕಿರಣ್ ಹಾಗೂ ಅವರ ತಂಡದವರಿಗೆ ಶುಭಾಶಯ ತಿಳಿಸುತ್ತೇನೆ . ಮುಖ್ಯವಾಗಿ ಕ್ರೀಡಾಪಟುಗಳಿಗೆ ಸಹಾಯವಾಗುವಂತಹ ಕ್ಲಬ್ ಆಗಿದ್ದು ಅದರಲ್ಲೂ ಸ್ಥಳೀಯ ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಿ ಉನ್ನತ ಮಟ್ಟಕ್ಕೆ ಹೋಗಲು ಈ ಕ್ಲಬ್ ಸಹಾಯವಾಗುತ್ತದೆ. ಸ್ಥಳೀಯ ಪರಿಸರವನ್ನು ಉಪಯೋಗಿಸಿಕೊಂಡು ಅಚ್ಚುಕಟ್ಟಾದ ವಾತಾವರಣ ನಿರ್ಮಿಸಿ ನೋಡುಗರ ಗಮನ ಸೆಳೆಯುತ್ತಿರುವಂತಹ ತಾಣವಾಗಿದೆ ಮುಖ್ಯವಾಗಿ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ದಿನ ಒಟ್ಟಿಗೆ ಪ್ರವಾಸ ಮಾಡಲು ಅನುಕೂಲವಾಗುವಂತಹ ಸ್ಥಳ ಹಾಗೆ ಈ ಕ್ಲಬ್ ಮುಖಾಂತರ ಜನರಿಗೆ ಅನುಕೂಲವಾಗುವಂತ ಕಾರ್ಯ ಆಗಬೇಕೆ ಹೊರತು ಅಹಿತಕರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಿವಿ ರಾಜಶೇಖರ್ ಗೌಡ, ಯಲಚನಹಳ್ಳಿ ದೇವರಾಜ್, ತಾವರೆಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್ ಗೌಡ, ನಂಜಪ್ಪ, ಕ್ಲಬ್ ನ ಮಾಲಿಕರಾದ ಕಿರಣ್ ಕುಮಾರ್, ತಾವರೆಕೆರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಜೀಯಾಹುಲ್ಲ , ಮುಗಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯ ನಾಗರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ನಂದಗುಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶಾಂತರಾಮ, ಹಾಗೂ ಸ್ಥಳೀಯ ನಾಯಕರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಹಾಜರಿದ್ದರು