ಆರೋಗ್ಯ ಸುಧಾರಣೆಯ ಕಡೆಗೆ ಗಮನಹರಿಸಿದರೆ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ–ದಿವ್ಯಶ್ರಿ

ವಿಜಯಪುರ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸುವುದರ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಚಕ್ರವರ್ತಿನಿ ಆಕಾಡೆಮಿಯ ಸಂಸ್ಥಾಪಕಿ ದಿವ್ಯಶ್ರೀ ಹೇಳಿದರು.ಪಟ್ಟಣದ ಅಶೋಕ ನಗರದಲ್ಲಿ ಚಕ್ರವರ್ತಿನಿ ಆಕಾಡೆಮಿ ವಿಜಯಪುರ, ಸೋಶಿಯಲ್ ಎಕಾನಮಿಕಲ್ ಎಜುಕೇಷನಲ್ ರಿಹೆಬಿಲಿಟೇಷನ್ ಸೊಸೈಟಿ ಚೆನ್ನೈ, ಅಭಯಹಸ್ತ ಸೇವಾ ಸಂಸ್ಥೆ ಭಾಗ್ಯನಗರ ಇವರ ಸಹಯೋಗದಲ್ಲಿ ವೈದೇಹಿ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲವನ್ನೂ ಗಳಿಸಿಕೊಳ್ಳುವುದು ಸುಲಭ. ಆದರೆ, ಉತ್ತಮ ಆರೋಗ್ಯ ಸಂಪಾದನೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಆರ್ಥಿಕವಾಗಿ ಸದೃಢರಲ್ಲದವರ ಸ್ಥಿತಿಯಂತೂ ಇಂದು ತುಂಬಾ ಕಠಿಣವಾಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದೇವೆ. ಇದರ ಜೊತೆಗೆ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ಶಿಬಿರಗಳನ್ನೂ ನಡೆಸುತ್ತಿದ್ದೇವೆ. ಬಹಳಷ್ಟು ಮಂದಿಗೆ ಉದ್ಯೋಗಗಳು ಸಿಕ್ಕಿವೆ. 250 ಕ್ಕೂ ಹೆಚ್ಚು ಮಂದಿಗೆ ವೈದೇಹಿ ಆಸ್ಪತ್ರೆಯ ವೈದ್ಯರ ತಂಡದಿಂದ ತಪಾಸಣೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತವಾಗಿ ಮಾಡಿಸುವಂತಹ ಸೌಲಭ್ಯವು ನಮ್ಮಲ್ಲಿ ಇದೆ ಎಂದರು.
ಶಿಬಿರದಲ್ಲಿ ಹೃದಯರೋಗ, ನರರೋಗ, ಕಿಡ್ನಿಯಲ್ಲಿ ಕಲ್ಲು, ಮೂತ್ರಕೋಶ ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕ್ಯಾನ್ಸರ್ ಕಾಯಿಲೆ, ಮೂಳೆಶಾಸ್ತ್ರ, ಸ್ತ್ರೀರೋಗ ತಜ್ಞರು, ಕಿವಿ, ಮೂಗು, ಗಂಟಲು ಪರೀಕ್ಷೆ, ಇ.ಸಿ.ಜಿ, ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಯಿತು.
ವೈದ್ಯರಾದ ಡಾ. ಚೈತಾಲಿ, ಡಾ.ಸಫಾನಾ, ಡಾ.ಶಾರದಾ, ಡಾ.ತಿನ್ನು, ಡಾ.ಲಲಿತಾ, ಡಾ.ಜೀವಿತಾ, ಕಾವ್ಯ, ಪಿ.ಆರ್.ಓ.ಹರೀಶ್ ಗೌಡ, ಬಿ.ಕೆ.ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ವೆಂಕಟೇಗೌಡ, ವಕೀಲ ಅಶ್ವಥ್, ರವಿಕುಮಾರ್, ವೈ.ಎಂ.ಶ್ರೀನಿವಾಸ್, ಗಿರೀಶ್, ಎನ್.ಶ್ರೀನಿವಾಸ್, ಡಿ.ಸಿ.ಚಂದ್ರಶೇಖರ್, ಎಸ್.ಶ್ರೀನಿವಾಸ್, ಮುಂತಾದವರು ಹಾಜರಿದ್ದರು.