ಭೂ ಸ್ವಾಧೀನ ಪ್ರಕ್ರಿಯ ಕೈಬಿಟ್ಟ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ದೊಡ್ಡಬಳ್ಳಾಪುರ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಪಟ್ಟಣ ಹೋಬಳಿಯ ಹದಿಮೂರು ಗ್ರಾಮಗಳ 1777ಎಕರೆ ಭೂಮಿಯ ಭೂ ಸ್ವಾದೀನ ಪ್ರಕ್ರಿಯೆ ಯನ್ನು ಸರ್ಕಾರ ಸಂಪೂರ್ಣವಾಗಿ ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ.
ಸುಮಾರು 1200ದಿನಗಳ ರೈತರ ಸುಧೀರ್ಘ ಹೋರಾಟದ ಪಲವಾಗಿ 1777ಎಕರೆ ಭೂಮಿಯ ಭೂ ಸ್ವಾದೀನವನ್ನು ಸ್ವಾಗತಿಸಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕನ್ನಡ ಪಕ್ಷ, ಕಮ್ಯುನಿಸ್ಟ್ ಪಕ್ಷ, ರಾಜ್ಯ ರೈತ ಸಂಘ, ಪ್ರಾಂತಿಯ ರೈತ ಸಂಘ, ರಾಜ್ ಅಭಿಮಾನಿ ಸಂಘ, ಕನ್ನಡ ಜಾಗೃತ ಪರಿಷತ್ತು, ಶಿವರಾಜ್ ಸೇನಾ ಸಮಿತಿ, ಹಾಗೂ ಕನ್ನಡ ಪರ, ದಲಿತ ಪರ, ಪ್ರಗತಿಪರ ಸಂಘಟನೆಗಳು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಿದವು.
ಸಂಭ್ರಮಾಚರಣೆಯಲ್ಲಿ ಕನ್ನಡಪಕ್ಷದ ರಾಜ್ಯ ಉಪಾಧ್ಯಕ್ಷ, ಸಂಜೀವ್ ನಾಯಕ್, ಜಿಲ್ಲಾ ಅಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ. ಪಿ. ಆಂಜನೇಯ, ಕಮ್ಯುನಿಸ್ಟ್ ಪಕ್ಷದ ವೆಂಕಟೇಶ್, ರುದ್ರಾರಾಧ್ಯ, ರಾಜ್ಯ ರೈತ ಸಂಘದ ಪ್ರಸನ್ನ, ಮುತ್ತೇಗೌಡ, ಮೂರ್ತಣ್ಣ, ರಾಜ್ ಅಭಿಮಾನಿ ಸಂಘದ ವಿ. ಪರಮೇಶ್, ಶಿವರಾಜ್ ಸೇನಾ ಸಮಿತಿಯ ರಮೇಶ್, ತಾಲೂಕು ಕನ್ನಡ ಪರ, ರೈತ ಪರ ದಲಿತ ಪರ, ಪ್ರಗತಿ ಪರ ಸಂಘಟನೆಗಳು, ಆಟೋ ಚಾಲಕರ ಸಂಘ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.