ಬಾನಂಗಳ ದಲ್ಲಿ ಚಿತ್ತಾರ ಮೂಡಿಸಿ ಸಭಿಕರ ಮನಸೂರೆ ಗೊಂಡ ಗಾಳಿಪಟ ಸ್ಪರ್ಧೆ
ದೊಡ್ಡಬಳ್ಳಾಪುರ: ನಮ್ಮ ಜನಸೇನಾ ಸಂಘಟನೆ ವತಿಯಿಂದ ಐದನೇ ವರ್ಷದ ಜಿಲ್ಲಾ ಮಟ್ಟದ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನಗರ ಹೊರ ವಲಯದ ಭುವನೇಶ್ವರಿ ನಗರದ ಮುನಿನಂಜಪ್ಪ ನವರ ಜಮೀನಿನಲ್ಲಿ ನಡೆದ ಗಾಳಿ ಪಟ ಸ್ಪರ್ಧೆಯಲ್ಲಿ ಆಂಜನೇಯ, ಕಾಳಿ ಮಾತೇ, ಗಣೇಶ, ಅರ್ಧ ನಾರೀಶ್ವರ ಲಕ್ಷ್ಮಿ ನರಸಿಂಹ, ಆರ್. ಸಿ. ಬಿ. ಪಟಗಳು ಸೇರಿದಂತೆ ವಿವಿಧ ರೂಪದ, ವಿವಿಧ ಬಣ್ಣಗಳ ಅಲಂಕೃತ ಬೃಹಧಾಕಾರ ಹಾಗೂ ಸಣ್ಣ ಗಾತ್ರದ ಗಾಳಿ ಪಟಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನೆರೆದಿದ್ದ ಸಭಿಕರ ಗಮನ ಸೆಳೆದಿದ್ದವು. ಇದೆ ಸಂದರ್ಭದಲ್ಲಿ ಉತ್ತಮ ಆಕರ್ಷಣೆ ಹಾಗೂ ಅತಿ ಎತ್ತರಕ್ಕೇರಿದ ಪಟಗಳ ಸ್ಪರ್ದಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ನಮ್ಮ ಜನಸೇನಾ ಸಂಘಟನೆ ರಾಜ್ಯಾಧ್ಯಕ್ಷರಾದ ಡಾ. ಜಿ. ನರಸಿಂಹಯ್ಯ ಗೌರವಾಧ್ಯಕ್ಷ ಬಿ. ರಾಮಯ್ಯ, ಯುವ ಘಟಕದ ಅಧ್ಯಕ್ಷ ರಮೇಶ್, ಕಾರ್ಮಿಕ ಘಟಕದ ಅನ್ನಪೂರ್ಣ, ರಾಜ್ಯ ಮಹಿಳಾ ಅಧ್ಯಕ್ಷೆ ರಾಣಿ, ಅರುಣ್ ಕುಮಾರ್, ದೇವರಾಜ್, ಗೀತಾ, ಜಗನ್ನಾಥ್, ಪ್ರಕಾಶ್, ಬಾಬು ಮುನಿರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಗಾಳಿಪಟ ಹಾರಾಟ ಸ್ಪರ್ಧೆಯು ವಿಶ್ವ ದಾದ್ಯಂತ ಜನಪ್ರಿಯ ಮನರಂಜನೆ ರೂಪವಾಗಿದ್ದು, ಈ ಜಾನಪದ ಕಲಾ ಪ್ರಾಕಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಲ್ಲೂ ಗಾಳಿ ಪಟ ಹಾರಾಟವು ನಮ್ಮ ಕರ್ನಾಟಕದ ಪ್ರಮುಖ ಜಾನಪದ ಬಾಗವಾಗಿದೆ. ಆದುನಿಕ ಜಗತ್ತಿನಲ್ಲಿ ನಶಿಸುತ್ತಿರುವ ಗಾಳಿಪಟ ಹಾರಾಟದಂತ ಜಾನಪದ ಕಲೆಯನ್ನು ಪ್ರಸ್ತುತ ಯುವ ಪೀಳಿಗೆ ಉಳಿಸಿ ಬೆಳೆಸಬೇಕಿದೆ.
ಕೆಂಪರಾಜ್
ಗಾಳಿಪಟ ಸ್ಪರ್ಧೆ ಆಯೋಜಕರು