ಕನ್ನಡ ಜಾಗೃತ ಪರಿಷತ್ ವತಿಯಿಂದ ದಿವಂಗತ ಖ್ಯಾತ ಅಭಿನೇತ್ರಿ ಬಿ. ಸರೋಜ ದೇವಿ ಹಾಗು ರಂಗಕರ್ಮಿ ಜವಾಜಿ ಸೀತಾರಾಮ್ ರವರಿಗೆ ನುಡಿ ನಮನ

ದೊಡ್ಡಬಳ್ಳಾಪುರ :ಕನ್ನಡ ಜಾಗೃತ ಪರಿಷತ್ ವತಿಯಿಂದ ನಾಡು ನುಡಿ ಭಾಷೆಗೆ ಸೇವೆ ಸಲ್ಲಿಸಿ ನಮ್ಮನ್ನ ಅಗಲಿದ ಚಿತ್ರರಂಗದ ಹಿರಿಯ ನಟಿ, ಅಭಿನಯ ಸರಸ್ವತಿ ಬಿ. ಸರೋಜ ದೇವಿ ಹಾಗು ಹಿರಿಯ ರಂಗಕರ್ಮಿ ಶ್ರೀ. ಜವಾಜಿ ಸೀತಾರಾಮ್ ರವರಿಗೆ
ಕನ್ನಡ ಜಾಗೃತ ಭವನದಲ್ಲಿ ನುಡಿ ನಮನ ಸಲ್ಲಿಸಲಾಯಿತು.

ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜವಾಜಿ ಸೀತಾರಾಮ್ ಅವರ ಕಿರಿಯ ಪುತ್ರ ಶ್ರೀ ರಾಜೇಶ್ ಮಾತನಾಡಿ ಸಹೋದರರು ಸೇರಿದಂತೆ ಅವರ ಮಕ್ಕಳಾಗಿ ಜನಿಸಿರುವುದು ನಮ್ಮ ಸೌಭಾಗ್ಯ, ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರ ಜೀವನಶೈಲಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಅವರು ಹಣದಲ್ಲಿ ಶ್ರೀಮಂತರಾಗದಿದ್ದರು ಗೌರವ, ಪ್ರೀತಿಗೆ ಶ್ರೀಮಂತರಾಗಿದ್ದರು ನಮ್ಮ ತಂದೆಯವರು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಿದು ನಮಗೆ ಹೆಮ್ಮೆ ನಮ್ಮ ತಂದೆಯವರು ರಂಗಭೂಮಿಯಲ್ಲಿ ನಾಟಕಗಳನ್ನು ನಿರ್ದೇಶನ ಮಾಡಿ ಈಗಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದೆಯಾದ ಅಭಿನಯ ಸರಸ್ವತಿ ಎಂದೇ ಹೆಸರು ಪಡೆದ ಬಿ.ಸರೋಜಾ ದೇವಿಯವರು ನಮ್ಮನ್ನು ಅಗಲಿರುವುದು ತುಂಬಾ ವಿಷಾದನೀಯ ನಮ್ಮ ತಂದೆ ಜವಾಜಿ ಸೀತಾರಾಮ್ ಮತ್ತು ಬಿ ಸರೋಜಾ ದೇವಿಯವರಿಗೆ ನುಡಿ ನಮನ ಸಲ್ಲಿಸುತ್ತಿರುವುದು ಅವರಿಗೆ ಸಲ್ಲಿಸಿದ ಗೌರವ ಎಂದು ಭಾವಿಸಿದ್ದೇನೆ ಎಂದರು.

ನಂತರ ಮಾಜಿ ನಗರಸಭಾ ಅಧ್ಯಕ್ಷ ತಾ.ನ. ಪ್ರಭುದೇವ್ ಮಾತನಾಡಿ ಜವಾಜಿ ಸೀತಾರಾಮ್ ನಮ್ಮ ದೊಡ್ಡಬಳ್ಳಾಪುರದ ಹೆಮ್ಮೆ ಎಂದೇ ಹೇಳಬಹುದು. ಅವರ ಸರಳ ಸಜ್ಜನಿಕೆ ಎಲ್ಲರಿಗೂ ಮಾರ್ಗದರ್ಶನವಾಗಿದೆ ಅವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡಿ ರಂಗಭೂಮಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಅವರು ಅಗಲಿರುವುದು ನಮ್ಮಗೂ ಹಾಗೂ ಅವರ ಕುಟುಂಬಕ್ಕೆ ತುಂಬಲಾಗದ ನಷ್ಟವಾಗಿದೆ. ಹಾಗೆ ಚಿತ್ರರಂಗದ ಹಿರಿಯ ನಟಿಯಾದ ಬಿ ಸರೋಜಾ ದೇವಿಯವರು ತಮ್ಮ ಅಭಿನಯದಿಂದ ಮನೆ ಮಾತಾಗಿದ್ದವರು. 80ರ ದಶಕದಲ್ಲಿ ಹೆಸರಾಂತ ನಟರ ಜೋತೆ ಅವರ ಅಭಿನಯದ ಚಿತ್ರಗಳು ಈಗಲೂ ಜನ ಮಾನಸದಲ್ಲಿ ಉಳಿದಿದೆ ಅವರ ಸಹಜ ಅಭಿನಯ ಈಗಿನ ನಾಯಕಿಯರಿಗೆ ಒಂದು ಪಾಠವಾಗಿದೆ ಎಂದರು

ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಕನ್ನಡ ಪಕ್ಷದ ವೆಂಕಟೇಶ ಚೌಡರಾಜ್ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳ ಮಹದೇವ್ ಶ್ರೀಕಾಂತ್ ಲಯನ್ಸ್ ರವಿಕಿರಣ್ ಡಿ ಪಿ ಅಂಜಿನೇಯ ಹಾಗು ಹಿರಿಯ ಮುಖಂಡರು ಹಾಜರಿದ್ದರು