ಬೆಂಕಿ ಅವಘಡಕ್ಕೆ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ :ತಾಲ್ಲೂಕಿನ,ಮದುರೆ ಹೋಬಳಿ ಕನ್ನಮಂಗಲ ಕಾಲೋನಿಯಲ್ಲಿ ಸಿಗರೇಟ್ ಸೇವನೆ ಮಾಡಿ ಬಿಸಾಡಿದ ತುಂಡಿನ ಕಿಡಿ ಕೆನ್ನಾಲಿಗೆಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೂಮಪಾನ ಮಧ್ಯಪಾನ ಅರೋಗ್ಯಕ್ಕೆ ಹಾನಿಕರ ಎಂದು ಹಿರಿಯರು ಹೇಳುತ್ತಾರೆ ಅದರೆ ಅದಕ್ಕಿಂತ ಘೋರ ದುರಂತ ನಡೆದು ಹೋಗಿದೆ. ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ ಹೋಬಳಿ ಕನ್ನಮಂಗಲ ಕಾಲೋನಿಯಲ್ಲಿ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಉದಯ್ ಕುಮಾರ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಮೃತ ಉದಯ ಕುಮಾರ್

ಅವಿವಾಹಿತನಾಗಿದ್ದು ತನ್ನ ತಾಯಿ ಜೊತೆಯಲ್ಲಿ ವಾಸವಾಗಿದ್ದ, ಕೂಲಿ ಕೆಲಸ ಮಾಡುತ್ತಿದ್ದ ಆತ ಕುಡಿತ ವ್ಯಸನಕ್ಕೆ ತುತ್ತಾಗಿದ್ದ, ಕೂಲಿ ಕೆಲಸ ಮಾಡಿ ಮನೆಗೆ ಬಂದಿದ್ದ ಆತ ಮಲಗಿದ್ದಾನೆ ಈ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಅಕ್ಕಪಕ್ಕದ ಮನೆಯವರು ಬೆಂಕಿ ಅರಿಸಿ ಮನೆಯಿಂದ ಹೊರಗೆ ತಂದಿದ್ದಾರೆ, ಆತ ಸಾವನ್ನಪ್ಪಿದ್ದಾನೆ.

ಪೊಲೀಸ್ ಮಾಹಿತಿ ಪ್ರಕಾರ, ನಿನ್ನೆ ಸಂಜೆ ಮನೆಗೆ ಬರುವ ಮುನ್ನ ಮದ್ಯ ಸೇವನೆ ಮಾಡಿದ್ದ, ಮನೆಗೆ ಬಂದವನು ದೂಮಪಾನ ಮಾಡಿ , ಮದ್ಯದ ನಶೆಯಲ್ಲಿ ಅಲ್ಲಿಯೇ ಮಲಗಿದ್ದಾನೆ, ಸೇದಿ ಬೀಸಾಕಿದ ಸಿಗರೇಟ್ ತುಂಡು ಬಟ್ಟೆ ರಾಶಿಗೆ ತಗುಲಿ ಬೆಂಕಿ ಅವರಿಸಿದೆ, ಬೆಂಕಿ ಇಡೀ ಮನೆಯನ್ನ ಅವರಿಸಿದೆ. ಮದ್ಯದ ಅಮಲಿನಲ್ಲಿ ಮನೆಯಿಂದ ಹೊರಗೆ ಬರಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.