ಬಿ. ಎಸ್. ಎ. ಪ್ರೌಡ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ

ದೊಡ್ಡಬಳ್ಳಾಪುರ:ಬಿ.ಎಸ್.ಎ .ಪ್ರೌಢಶಾಲೆ 32 ವರ್ಷದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗು ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿತ್ತು.

ದೊಡ್ಡಬಳ್ಳಾಪುರ ನಗರದ ಕೋರ್ಟ್ ಮುಂಭಾಗದ ಬಿ ಎಸ್ ಎ. ಶಾಲೆಯಲ್ಲಿ 1993-96 ಸಮಯದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸೇರಿ ಗುರುಗಳಿಗೆ ಹಾರ ತುರಾಯಿ ಇಟ್ಟು ಸನ್ಮಾನ ಮಾಡಿ ಗುರು ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದ ಸಂಭ್ರಮದಲ್ಲಿ ಭಾಗವಹಿಸಿದ ಶಿಕ್ಷಕರು ಕೆ. ವಿ. ಸುರೇಂದ್ರ ರಾವ್, ತಮ್ಮಯ್ಯ, ದೇವರಾಜ್, ನರಸಿಂಹಮೂರ್ತಿ, ವೆಂಕಟೇಶ್ ವೆಂಕಟಾಲಕ್ಷ್ಮಮ್ಮ ಮತ್ತು ಹಳೆಯ ವಿದ್ಯಾರ್ಥಿಗಳಾದ ಎಂ ವಿ, ಹರೀಶ್, ಶಶಿಧರ್ ಡಿ ಆರ್ ಮಂಜುನಾಥ್ ,ಪ್ರಭಾಕರ್ , ಲಕ್ಷ್ಮಿಪತಿ ಅವರು ಲೋಕೇಶ್, ಮಮತಾ, ಸವಿತಾ, ಸುನಂದಮ್ಮ, ಭಾಗವಹಿಸಿದ್ದರು