ವಿದ್ಯಾರ್ಥಿಗಳಿಗೆ ಮುಂದೆ ಗುರಿ ಇರಬೇಕು ಹಾಗೂ ಹಿಂದೆ ಗುರು ಇರಬೇಕು – ಚಂದನ್ ರವಿಶಂಕರ್

ವಿಜಯಪುರ:ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳ ಮೇಲೆ ಮಾತ್ರ ಅವಲಂಬಿತರಾದರೆ ಸಾಲದು, ಓದಿನ ಜೊತೆಯಲ್ಲಿ ಯಾವುದಾದರು ಕೌಶಲ್ಯವನ್ನು ರೂಢಿಸಿಕೊಂಡರೆ, ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ತಮ್ಮನ್ನು ಅರಸಿ ಬರುತ್ತವೆ, ಇದಕ್ಕಾಗಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಇರಬೇಕು ಎಂದು ನೇಟೀವ್ ಡ್ರೀಮ್ಸ್ ಸಂಸ್ಥೆಯ ಮಾಲೀಕರಾದ ಚಂದನ್ ರವಿಶಂಕರ್ ಅವರು ತಿಳಿಸಿದರು. ಅವರು ಇಲ್ಲಿನ ಅ.ಶಿ‌.ವೈ. ನಗರ್ತ ಯುವಕ ಸಂಘದ ವತಿಯಿಂದ ನಡೆದ ವಿದ್ಯಾ ಸವಲತ್ತು ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ವಿ.ಬಸವರಾಜು ಅವರು ನಗರ್ತ ಸಮಾಜದ ವಿದ್ಯಾರ್ಥಿಗಳು ಸಂಘದ ವತಿಯಿಂದ ಪಡೆದ ವಿದ್ಯಾಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸಂಘದ ಹಾಗೂ ದೇವಾಲಯದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ನಂದಿನಿ ಶಾಲೆಯ ಉಪಪ್ರಾಂಶುಪಾಲರಾಗಿದ್ದ ಶ್ರೀಮತಿ ವಿಮಲಾ ಸಿದ್ಧರಾಜು ಅವರಿಗೆ ಸಂಘದ ವತಿಯಿಂದ ಗೌರವಸಮರ್ಪಣೆ ನೀಡಲಾಯಿತು. ಯುವ ಪ್ರತಿಭೆ ವಿಭಾಗದಲ್ಲಿ ಹೊಸೂರಿನ ಶಿಕ್ಷಕಿ ಅರುಣಾ ರಮೇಶ್ ಅವರಿಗೆ ಸಂಘದ ವತಿಯಿಂದ ಅಭಿನಂದನೆ ನೀಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಗಯಲ್ಲೀ 625 ಅಂಕಗಳನ್ನು ಗಳಿಸಿ ವಿಜಯಪುರ ಪಟ್ಟಣಕ್ಕೆ ಕೀರ್ತಿ ತಂದ ಕುಮಾರಿ ಭಾವನ ಹಾಗೂ ರೋಹನ್ ರಾಜ್ ಅವರನ್ನು, ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ನಗರ್ತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕೋರಮಂಗಲ ರುದ್ರಪ್ಪ ಟ್ರಸ್ಟಿನ ಅಧ್ಯಕ್ಷರಾದ ಸಿ.ಭಾಸ್ಕರ್, ನಗರ್ತ ಯುವಕ ಸಂಘದ ಗೌರವ ಅಧ್ಯಕ್ಷರಾದ ಮ.ಸುರೇಶಬಾಬು, ಕಾರ್ಯದರ್ಶಿ ವಿಶ್ವಾಸ್ ಯೋಜನಾ ನಿರ್ದೇಶಕರಾದ ಎಂ.ಮಧು, ಹರ್ಷ, ಸುರೇಶ್ ಬಾಬು, ಸಂಘದ ಸದಸ್ಯರುಗಳಾದ ಬಿ.ಕೆ.ದಿನೇಶ್, ಪಿ.ಮುರಳೀಧರ್, ರುದ್ರಮೂರ್ತಿ, ಪುನೀತ್, ಸುರೇಶ್ ಬಾಬು, ಸಿ.ಮಹೇಶ್, ಎನ್.ವಿಶ್ವನಾಥ್ ಅವರು ಉಪಸ್ಥಿತರಿದ್ದರು.