ಮುಗಬಾಳ ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಕಸ್ತೂರಿ ನಂಜಪ್ಪ ಅವಿರೋಧ ಆಯ್ಕೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಕಸ್ತೂರಿ ನಂಜಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಮಾತನಾಡಿದ ನೂತನ ಅಧ್ಯಕ್ಷರು, ನನ್ನ ಪ್ರಥಮ ಆದ್ಯತೆ ಮುಗಬಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಆರು ಗ್ರಾಮಗಳಲ್ಲೂ ಮೂಲಭೂತವಾಗಿ ಎಲ್ಲ ರೀತಿಯ ಅಭಿವೃದ್ದಿ ಕಾರ್ಯಗಳಿಗೆ ಆಧ್ಯತೆ ನೀಡಲಾಗುವುದು. ಜನರ ವಿಶ್ವಾಸಕ್ಕೆ ತಕ್ಕಂತೆ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುವುದು ಮುಗಬಾಳ ಗ್ರಾಪಂಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಲು ಬೆಂಡಿಗಾನಹಳ್ಳಿ ಕುಟುಂಬದವರು, ಶಾಸಕರಾದ ಶರತ್ ಬಚ್ಚೇಗೌಡರ ಸಹಕಾರ ಪ್ರೋತ್ಸಾಹ ನೀಡಿದ್ದಾರೆ ಹಾಗೂ ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿ ವಿ ರಾಜಶೇಖರ್ ಗೌಡರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೋಡಿಹಳ್ಳಿ ಸುರೇಶ್ ಅವರ ಬೆಂಬಲವೂ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಚತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಜನರಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ಪಂಚಾಯಿತಿ ಆಡಳಿತದಲ್ಲಿ ಉತ್ತಮ ಸುಧಾರಣೆಯನ್ನು ತರಲಾಗುವುದು. ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭಾಗ್ಯ ನಾಗರಾಜ್ ಮಾತನಾಡಿ, ನನ್ನ ಆಡಳಿತ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ನೂತನ ಅಧ್ಯಕ್ಷರು ಪೂರ್ಣಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಹಾಗೂ ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮದಲ್ಲಿ ಹಾಗೂ ಪಂಚಾಯತಿಯ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಯಾವುದೇ ತರ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳ ಕಡೆ ನಮ್ಮ ಗಮನ ಹರಿಸಿದ್ದೆವು ಇದನ್ನು ಈಗಿನ ಅಧ್ಯಕ್ಷರು ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸಿದರು.

ಮಾಜಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ವಿ ರಾಜಶೇಖರ್ ಗೌಡರು ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು ಸೇರಿದಂತೆ ಎಲ್ಲರ ಸಹಕಾರ ಪ್ರೋತ್ಸಾಹದಿಂದ ನೂತನ ಅಧ್ಯಕ್ಷರು ಉತ್ತಮ ಆಡಳಿತ ನೀಡಲಿದ್ದಾರೆ.ಎಲ್ಲ ಸದಸ್ಯರು ಸಹಕಾರದೊಂದಿಗೆ ಅವರ ವಿಶ್ವಾಸಗಳಿಸಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಿದ್ದಾರೆ ಹಾಗೂ ಇದು ಕಡೆಯ ಅಧ್ಯಕ್ಷರ ಆಯ್ಕೆ ಮುಂದೆ ಚುನಾವಣೆಯನ್ನು ಎದುರಿಸುವ ದೃಷ್ಟಿಯಿಂದ ಜನರಲ್ಲಿ ಆತ್ಮವಿಶ್ವಾಸ ಗಳಿಸಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ವೆಂಕಟೇಶ್ ಮೂರ್ತಿ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ತಾಲೂಕ್ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ವಿ ರಾಜಶೇಖರ್ ಗೌಡರು, ಆದಿಶಕ್ತಿ ಮಹಾ ಸಂಸ್ಥಾನ ಮಠದ ಅಧ್ಯಕ್ಷರಾದ ಸಿ. ಮುನಿಯಪ್ಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ನಾರಾಯಣಮ್ಮ ತಿಮ್ಮಪ್ಪ, ಸದಸ್ಯರಾದ , ಅನ್ವರ್ ಬೇಗ್, ಶೋಭಾ ,ಮುನಿಕೃಷ್ಣಪ್ಪ ಎ, ರಮೇಶ್ ಎ.ಎಂ , ಆರ್ ,ನಾಗರಾಜ್ ,ಮುನಿರಾಜು ಜಿ.ಸಿ, ನಾರಾಯಣಸ್ವಾಮಿ ,ನಾರಾಯಣಸ್ವಾಮಿ, ನಾರಾಯಣಮ್ಮ ,ರಮೇಶ್ , ಶಾಜಿಯಾ ,ಮಂಜುಳಾ ,ಸಂದೀಪ್ ಕೃಷ್ಣಪ್ಪ , ಪಂಚಾಯಿತಿ ಕಾರ್ಯದರ್ಶಿ ಮೆಹಬೂಬ್ ಸಾಬ್ ,SDAA ಆನಂದ್ ಕುಮಾರ್.ವಿ ,ಗ್ರಾಮ ಪಂಚಾಯಿತಿ ಕರಸೂಲಿಗಾರ ನರಸಿಂಹಯ್ಯ, ಹಾಗೂ ಗ್ರಾಮಸ್ಥರು ಊರಿನ ಮುಖಂಡರು ಸ್ಥಳದಲ್ಲಿ ಹಾಜರಿದ್ದರು.