ಮಧುಗಿರಿ ತಾಲೂಕಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ

ಮಧುಗಿರಿ:ಮಧುಗಿರಿಯ ಪುರಸಭಾ ಆವರಣದಲ್ಲಿ ಪಟ್ಟಣದ ಸಾರ್ವಜನಿಕರ ಅನುಕೂಲಕ್ಕಾಗಿ ಮೂರು ಕಸ ವಿಲೇವಾರಿ ವಾಹನಗಳು, ರಸ್ತೆಯ ದೂಳು ಎತ್ತುವ ಯಂತ್ರ, ಹಾಗೂ ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಿ ನೂತನ ವಾಹನಗಳಿಗೆ ಹಸಿರು ನಿಶಾನೆ ತೋರಿಸಲಾಯಿತು
ಸಿದ್ದಾಪುರ ಗೇಟ್ ನಿಂದ ಮರಿತಿಮ್ಮನಹಳ್ಳಿ ನೇರಳೆಕೆರೆ ಮಾರ್ಗವಾಗಿ ಮೂರು ಕೋಟಿ 10 ಲಕ್ಷ ರೂ ವೆಚ್ಚದಲ್ಲಿ ರಸ್ತೆಗುದ್ದಲಿ ಪೂಜೆ ಹಾಗೂ ಒಂದು ಕೋಟಿ ರೂ ವೆಚ್ಚದಲ್ಲಿ ಅವರಗಲ್ಲು ಮುಖ್ಯ ರಸ್ತೆಯಿಂದ ನೇರಳೆ ಕೆರೆ ಸೇರುವ ರಸ್ತೆ ಹಾಗೂ ಒಂದು ಕೋಟಿ ರೂ ವೆಚ್ಚದಲ್ಲಿ ಚಂದ್ರಬಾವಿಯಿಂದ ಮಡಕಶಿರಾ ಮಧೂಡಿ ಆಂಧ್ರಗಡಿ ಸೇರುವ ರಸ್ತೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನಯ್ಯ, ಮುಖ್ಯಾಧಿಕಾರಿ ಸುರೇಶ್, ತುಮುಲ್ ನಿರ್ದೇಶಕ ಬಿ. ನಾಗೇಶ್ ಬಾಬು ಹಾಗೂ ಪುರಸಭಾ ಹಾಲಿ ಮಾಜಿ ಸದಸ್ಯರು ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶಾಮಣ್ಣ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌರಮ್ಮ ಗಂಗಾಧರ್ ಉಪಾಧ್ಯಕ್ಷ ಚೌಡಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ಯೋಜನಾಧಿಕಾರಿ ಮಧುಸೂದನ್ ಹೊಸಕೆರೆ ಗ್ರಾಮ ಪಂಚಾಯಿತಿ ಅಧಿಕಾರಿ ಶಿವಕುಮಾರ್ ಮುಖಂಡರು, ನೌಕರರು, ಸಾರ್ವಜನಿಕರು, ಭಾಗವಹಿಸಿದ್ದರು.

ವರದಿ : ಭರತ್ ಕೆ