PTCL ಅರ್ಜಿಗಳ ವಿಚಾರಣೆ ವಿಳಂಬ, ಆದೇಶಕ್ಕೆ ತಡೆ ನೀಡುತ್ತಿರುವ ಜಿಲ್ಲಾಧಿಕಾರಿಗಳು, ದಲಿತರ ಭೂಮಿ ಉಳಿಸುವಂತೆ ಮನವಿ ಮಾಡಿದ ನೆಲಮಂಗಲ ಬಸವರಾಜು

ದೊಡ್ಡಬಳ್ಳಾಪುರ: ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ಹಾಗೂ ಕುಂದು ಕೊರತೆ ಸಭೆ ನೆಡೆಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಭೆಯ ನಂತರ ಜಿಲ್ಲಾ ಸಂಚಾಲಕರಾದ ರಾಮಮೂರ್ತಿ (ರಾಮು) ನೇರಳಘಟ್ಟ ಮಾತನಾಡಿ ಸಂಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪ್ರಬಲವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ .ದಲಿತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ವಂದಿಸುವ ಮೂಲಕ ಸಹಕರಿಸಬೇಕಿದೆ, ಎಷ್ಟೋ ಭೂಮಿಗಳನ್ನು ದಲಿತರಿಂದ ಉಳ್ಳವರು ಮೇಲ್ಜಾತಿ ವರ್ಗದವರು ಕಬಳಿಸುತ್ತಿದ್ದಾರೆ, PTCL ಕಾಯ್ದೆ ಕೇವಲ ನಮ್ ಕಾ ವಾಸ್ತೆ ಆಗದೇ ದಲಿತರ ಭೂಮಿ ಉಳಿಸಲು ಉಪಯೋಗವಾಗಬೇಕಿದೆ ಎಂದರು.

ರಾಜ್ಯ ಸಮಿತಿಯು ಸಮಿತಿ ಆದೇಶದ ಮೇರೆಗೆ ಪ್ರತಿ ತಾಲೂಕಿನ ವ್ಯಾಪ್ತಿಗೆ ಉಪ ಸಮಿತಿಗಳ ರಚನೆ ಮಾಡಲಾಗಿದೆ ಪ್ರತಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಸ್ಥಳೀಯ ಪದಾಧಿಕಾರಿಗಳಿಗೆ ನೀಡಲಾಗಿದೆ. ರೈತರ ಸಾಗುವಳಿ ಚೀಟಿ ವಿತರಣಾ ಸಮಸ್ಯೆ, ವಸತಿ ಸಮಸ್ಯೆ, ದಲಿತರ ಮೇಲೆ ಹಲ್ಲೆ ಪ್ರಕರಣಗಳು ಕುರಿತಂತೆ ನಮಗೆ ದೂರು ಬಂದಿದ್ದು ಈ ಕುರಿತು ತಾಲ್ಲೂಕು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಸೂಕ್ತ ಕ್ರಮಕೊಳ್ಳದ ಪಕ್ಷದಲ್ಲಿ ಸಂಘಟನೆವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ರಾಜ್ಯ ಸಮಿತಿ ಸದಸ್ಯರಾದ ನೆಲಮಂಗಲ ಬಸವರಾಜು ಮಾತನಾಡಿ, ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಅವರ ಆದೇಶದ ಮೇರೆಗೆ ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಮಿತಿಯ ಸರ್ವ ಸದಸ್ಯರ ಸಭೆ ನೆಡೆಸಲಾಗಿದೆ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ತಾಲ್ಲೂಕಿನ ಹಲವು ಸಮಸ್ಯೆ ಗಳನ್ನು ಅಲಿಸಿದ್ದೇವೆ, ಪ್ರಮುಖವಾಗಿ ಪ ದಲಿತರ ಭೂಮಿ ಕಬಳಿಕೆ ಆರೋಪ ಕೇಳಿಬಂದಿದ್ದು ಈ ಕುರಿತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ಪಿಟಿಸಿಎಲ್ ಕಾಯ್ದೆ ಅಡಿಯಲ್ಲಿ ದಲಿತರ ಭೂಮಿ ಸಂರಕ್ಷಣೆಗೆ ಮುಂದಾಗಲಿದ್ದೇವೆ ಎಂದರು.

ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಆದೇಶ ಬಂದು ಆಗಸ್ಟ್ ಗೆ ಒಂದು ವರ್ಷ ಆಗಿದೆ, ಆದರೆ ಇಲ್ಲಿಯವರೆಗೂ ಒಳ ಮೀಸಲಾತಿ ಜಾರಿಯಾಗಿಲ್ಲ, ದಲಿತರ ಪರ ಎಂಬ ಕಾರಣಕ್ಕೆ ರಾಜ್ಯದಲ್ಲಿ ನಾವು ಸಿದ್ದರಾಮಯ್ಯ ಸರ್ಕಾರವನ್ನ ಅಧಿಕಾರಕ್ಕೆ ತಂದೇವು, ಒಳ ಮೀಸಲಾತಿ ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಳಂಬ ಮಾಡುತ್ತಿದ್ದಾರೆ, ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ ನಾವು ಸಂಘಟನೆಯಿಂದ ಮತ್ತೆ ಉಗ್ರ ಹೋರಾಟ ಮಾಡುವುದ್ದಾಗಿ ಹೇಳಿದರು.

ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನ ಸಂಚಾಲಕರು ಬಸವರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ,ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಬೈಲಾಂಜಿನಮೂರ್ತಿ, ಎನ್.ನರಸಿಂಹಮೂರ್ತಿ,ಮನೋಜ್.ವಿ, ನಾಗರತ್ನಮ್ಮ ಮಲ್ಲೋಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಂದಿಗುಂದ ಮೈಲಾರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.