ವಸುದೈವ ಕುಟುಂಬಕಂ ಎಂಬುವುದು ನಮ್ಮ ಸಂಸ್ಕೃತಿ
ವಿಜಯಪುರ: ಯುವಜನತೆ ಈ ದೇಶದ ಸಂಪತ್ತು ಹಾಗೂ ಬೆನ್ನೆಲುಬು ಎಂದು ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ ತಿಳಿಸಿದರು.
ಇವರು ಎನ್.ವೈ.ಪಿ ವಿಜಯಪುರ ಘಟಕದ ಆವರಣದಲ್ಲಿ ಕೇರಳ ರಾಜ್ಯದ ರಾಷ್ಟ್ರೀಯ ಯುವ ಯೋಜನೆ ಇವರು ತ್ರಿಶೂರ್ ನ
ಚಾಲಕುಡಿ ರೆಸ್ಟ್ ಹೌಸ್ ನ ಆವರಣದಲ್ಲಿ ಆಯೋಜಿಸಲಾದ ಆರು ದಿನಗಳ ಭಾರತ್ ಕೀ ಸಂತಾನ್ ರಾಷ್ಟ್ರೀಯ ಭಾವೈಕ್ಯತಾ ಮಾಸ್ಟರ್ ಟ್ರೈನಿಂಗ್ ತರಬೇತಿಯಲ್ಲಿ ಭಾಗವಹಿಸುವ ಸ್ವಯಂಸೇವಕರಿಗೆ ಶಿಬಿರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿ ಯುವಜನತೆ ಈ ದೇಶದ ಭವಿಷ್ಯದ ಆಶಾಕಿರಣವಾಗಿ ತಮ್ಮ ಶಕ್ತಿ ಹಾಗೂ ಉತ್ಸಾಹದ ಹೊಸ ಆಲೋಚನೆಗಳೊಂದಿಗೆ ದೇಶದ ಅಭಿವೃದ್ಧಿಎತ್ತ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇವರುಗಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿ,ಕ್ರೀಡೆ,ನೃತ್ಯ, ಜೀವನ ಕೌಶಲ್ಯ,ನಾಯಕತ್ವ ಮತ್ತು ಇತರೆ ವಿಭಾಗಗಳಲ್ಲಿನ ಅವರ ಆಸಕ್ತಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ರಾಷ್ಟ್ರೀಯ ಯುವ ಯೋಜನೆಯ ಮಹತ್ವದ ಕಾರ್ಯವಾಗಿದೆ ಎಂದರು.
ಬೆಂಗಳೂರಿನ ಟಿ.ಇ.ಕನೆಕ್ಟಿವಿಟಿ ಕಂಪನಿಯ ಮೇಲ್ವಿಚಾರಕ ಎಂ.ಮುನಿರಾಜ ಮಾತನಾಡಿ ಯುವಕರು ಮಾನವೀಯ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಇವರ ಪಾತ್ರ ಬಹಳ ಮುಖ್ಯ ಆದ್ದರಿಂದ ಯುವಜನತೆ ತಮ್ಮ ಶಕ್ತಿ,ಸಾಮರ್ಥ್ಯ ಉತ್ಸಾಹ ಮತ್ತು ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಈ ದೇಶದಅಭಿವೃದ್ಧಿ ಯತ್ತ ಸದಾಶ್ರಮಿಸಬೇಕೆಂದರು.
ಭಾರತ್ ಕೀ ಸಂತಾನ್ ರಾಷ್ಟ್ರೀಯ ಭಾವೈಕ್ಯತಾ ಮಾಸ್ಟರ್ ಟೈಮಿಂಗ್ ತರಬೇತಿ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಬೆಂಗಳೂರು ಗ್ರಾಮಾಂತರ ವಿಜಯಪುರ ಪಟ್ಟಣದ ಶ್ರೀ ಸಾಯಿ ಜ್ಞಾನ ಗಂಗಾ ಪದವಿ ಕಾಲೇಜಿನ ಬಿ.ಎಂ.ತರುಣ್, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಮರಳ್ಳಿ ಗ್ರಾಮದ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಜಿ. ನಾಗೇಶ ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆ.ಆರ್ ಪುರಂ ನ ಕೇಂಬ್ರಿಡ್ಜ್ ಕಾಲೇಜ್ ನ ಎಂ. ನಂದನ್ ಕುಮಾರ್ ಇವರುಗಳನ್ನು ಅಭಿನಂದಿಸಲಾಯಿತು.
ಉಪಸ್ಥಿತಿಯಲ್ಲಿ ಕೆ.ಆರ್ ಪುರಂ ನ ಕೇಂಬ್ರಿಡ್ಜ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಬಿ.ಸಿ.ಯಶ್ವಂತ್ ಹಾಗೂ ಆರ್.ತೇಜಸ್ ಮೊದಲಾದವರು ಹಾಜರಿದ್ದರು.