ಘಾಟಿ ಕ್ಷೇತ್ರದಲ್ಲಿ ನಾಗರಪಂಚಮಿ ಸಂಭ್ರಮ
ದೊಡ್ಡಬಳ್ಳಾಪುರ: ತಾಲ್ಲೂಕಿನ,ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಶ್ರಾವಣ ಮಾಸ ಮಂಗಳವಾರ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 5:00 ಗಂಟೆಗೆ ಅಭಿಷೇಕ ನಂತರ ಮಹಾಮಂಗಳಾರತಿ ನಡೆಯಿತು. ದೇವಾಲಯಕ್ಕೆ ಬಂದ ಭಕ್ತಾದಿಗಳು ನಾಗರ ಕಲ್ಲಿಗೆ ಹುತ್ತಕ್ಕೆ ಹಾಲು ಮೊಸರು ತುಪ್ಪದಿಂದ ಅಭಿಷೇಕ ಅರ್ಪಿಸಿ ದನ್ಯತೆ ಮೆರೆದರು.
ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಬೆಂಗಳೂರು ಗ್ರಾಮಾಂತರ ಹಾಗು ಚಿಕ್ಕಬಳ್ಳಾಪುರ ತುಮಕೂರು ಹಾಗು ಹೊರ ರಾಜ್ಯದ ತಮಿಳುನಾಡು ಅಂದ್ರ ಪ್ರದೇಶ ದಿಂದಲು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳು ನೇರವೇರಿಸುವಂತೆ ಈ ದಿನದಂದು ಮಹಿಳೆಯರು ಉಪವಾಸ ಮಾಡಿ, ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಮತ್ತು ತಮ್ಮ ಸಹೋದರರ ಆರೋಗ್ಯ ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ. ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಪಂಚಮಿ ದಿನದಂದು ಆಚರಿಸಲಾಗುತ್ತದೆ.
ಈ ದಿನದಂದು ನಾಗದೇವತೆಯನ್ನು ಪೂಜಿಸಲಾಗುತ್ತದೆ. ನಾಗದೇವತೆಯು ವಿಷ್ಣುವಿನ ಆಭರಣ ಮತ್ತು ಶಿವನ ಗಂಟಾಗಿದೆ ಎಂದು ಹೇಳಲಾಗುತ್ತದೆ.
ನಾಗರ ಪಂಚಮಿ ಆಚರಣೆಯು ಸರ್ಪಗಳ ಭಯವನ್ನು ಹೋಗಲಾಡಿಸುವಂತೆ ಮತ್ತು ಸರ್ಪದೋಷ ಕಾಳಸರ್ಪದೋಷ ಕುಜದೋಷ ಪರಿಹಾರಕ್ಕಾಗಿ ಹಾಗು ಸರ್ವ ಪಾಪಗಳು ಪರಿಹರಿಸುವಂತೆ ಮತ್ತು ವಿಷಬಾಧೆಯಿಂದ ರಕ್ಷಿಸುತ್ತದೆ ದೇವರ ಮೊರೆ ಹೋಗುತ್ತಾರೆ.
ಆಚರಣೆ ವಿಧಾನ:
ಮಹಿಳೆಯರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ಧರಿಸಿ, ಅಲಂಕಾರ ಮಾಡಿಕೊಳ್ಳುತ್ತಾರೆ. ನಾಗದೇವತೆಯ ವಿಗ್ರಹ ಅಥವಾ ಚಿತ್ರವನ್ನು ಇಟ್ಟು, ಹಾಲಿನ ಅಭಿಷೇಕ ಮಾಡಿ, ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಾರೆ.
ನಂತರ, ನಾಗ ದೇವರಿಗೆ ಹಾಲಿನ ನೈವೇದ್ಯ ತಂಬಿಟ್ಟು, ಎಳ್ಳುಂಡೆ ಅರ್ಪಿಸುತ್ತಾರೆ ಇದು ನಾಗರ ಪಂಚಮಿಯ ವೈಶಿಷ್ಟ್ಯ