ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು*

ವಿಜಯಪುರ:ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆದಂತಹ ಈ ಶೈಕ್ಷಣಿಕ ಸಾಲಿನ ಪ್ರೌಢಶಾಲಾ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿ ಹಲವಾರು ವಿಭಾಗಗಳಲ್ಲಿ ಜಯಗಳಿಸಿ ತಾಲೂಕು ಮಟ್ಟದ ಕ್ರೀಡಾಕೂಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ಶಾಲೆಯ ಥ್ರೋಬಾಲ್ ತಂಡವು ಹಾಗೂ ಬಾಲಕಿಯರ ವಿಭಾಗದಲ್ಲಿ ಶಾಲೆಯ ವಾಲಿಬಾಲ್ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದ 4x 400 ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 4×100 ರಿಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಬಾಲಕರ ವಿಭಾಗದ 4×400 ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆಯ ತಂಡಗಳು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತವೆ. ವೈಯಕ್ತಿಕ ವಿಭಾಗದಲ್ಲಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ಈ ಮುಂದಿನಂತಿದೆ.
1) ಎಂ ಶ್ರೇಯಶ್ರೀ = 200 ಮೀ ಓಟದಲ್ಲಿ ಪ್ರಥಮ ಸ್ಥಾನ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
2) ಎಂ ಪದ್ಮಶ್ರೀ = 100 ಮೀ ಓಟದಲ್ಲಿ ಪ್ರಥಮ ಸ್ಥಾನ
4) ಎಸ್ ಪಾವನಿ = ಶಾಟ್ ಪುಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹ್ಯಾಮರ್ ಥ್ರೋ ನಲ್ಲಿ ಪ್ರಥಮ ಸ್ಥಾನ
5) ಜಿ ಕಾಶಿಕ = ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
6) ಎಮ್ ಪ್ರತಿಕ್ಷ = ಟ್ರಿಪಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ
7) ಪಿ ಕುಸುಮಿತ = ಡಿಸ್ಕ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಹಾಗೂ ಹ್ಯಾಮರ್ ಥ್ರೋ ನಲ್ಲಿ ದ್ವಿತೀಯ ಸ್ಥಾನ
8) ಆರ್ ವೈಷ್ಣವಿ = ಟ್ರಿಪಲ್ ಜಂಪ್ ದ್ವಿತೀಯ ಸ್ಥಾನ
9) ಪಿ ಆರ್ ಸಹನಾ = 1500 ಮೀ ಓಟ ಸ್ಪರ್ಧೆಯಲ್ಲಿ ಮೂರನೇ ಸ್ಥಾನ
10) ಜಿ ಕೃತಿಕಾ = 1500 ಮೀ ಓಟ ಮೂರನೇ ಸ್ಥಾನ
11) ಜಿ ಪ್ರಣಿತ್ = ಹ್ಯಾಮರ್ ಥ್ರೋ ಪ್ರಥಮ ಸ್ಥಾನ, ಶಾಟ್ ಪುಟ್ ದ್ವಿತೀಯ ಸ್ಥಾನ, ಡಿಸ್ಕ್ ಥ್ರೊ ತೃತೀಯ ಸ್ಥಾನ,
12) ಕೇಶವಪ್ರಸಾದ್ = ಡಿಸ್ಕ್ ಥ್ರೋ ಪ್ರಥಮ ಸ್ಥಾನ, ಜಾವೆಲಿನ್ ಥ್ರೋ ದ್ವಿತೀಯ ಸ್ಥಾನ
13) ಪಿ ಸೋಹನ್ ಗೌಡ = ಹ್ಯಾಮರ್ ಥ್ರೋ ದ್ವಿತೀಯ ಸ್ಥಾನ
14) ಆರ್ ಕೆ ಹರ್ಷ = 1500 ನಡಿಗೆ ಸ್ಪರ್ಧೆ ದ್ವಿತೀಯ ಸ್ಥಾನ
15) ಎಂ ಆಕಾಶ್ = 800 ಮೀ ಓಟ ದ್ವಿತೀಯ ಸ್ಥಾನ
16) ಎಂ ಗುಣವ್ = 5 ಕಿಮೀ ನಡಿಗೆ ಸ್ಪರ್ಧೆ ತೃತೀಯ ಸ್ಥಾನ
17) ವಿ ಮಿಥುನ್ = 400 ಮೀ ಓಟ ತೃತೀಯ ಸ್ಥಾನ
ವಿಜೇತರಾದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದಂತ ಶ್ರೀಯುತ ಎಂ ಸತೀಶ್ ಕುಮಾರ್ ಅವರು, ವ್ಯವಸ್ಥಾಪಕ ನಿರ್ದೇಶಕರಾದಂತಹ ಎಸ್ ಕೃಪಾಶಂಕರ್ ಅವರು, ಆಡಳಿತ ಅಧಿಕಾರಿಗಳಾದ ರಜತ ಪಟೇಲ್ ಅವರು, ಮುಖ್ಯಶಿಕ್ಷಕ ವಿ ಬಸವರಾಜ ರವರು ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದರು.
ಶ್ರೀಯುತ ಎಂ ಸತೀಶ್ ಕುಮಾರ್ ಅವರು ಮಾತನಾಡಿ, ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ಮುಂದಿನ ತಾಲೂಕು ಹಂತ ಹಾಗೂ ಜಿಲ್ಲಾ ಹಂತದಲ್ಲೂ ವಿಜೇತರಾಗಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಮ್ಮ ಪ್ರಗತಿ ಶಾಲೆಯನ್ನು ಪ್ರತಿನಿಧಿಸುವಂತೆ ತಿಳಿಸಿದರು,