ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಸರಕಾರಕ್ಕೆ ಒತ್ತಾಯ
ವಿಜಯಪುರ: ಸುಫ್ರೀಂಕೋರ್ಟ್‍ನ ಆದೇಶದಂತೆ, ರಾಜ್ಯದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಜಾಂಬವ ಯುವಸೇನೆಯ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಒತ್ತಾಯಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ನಿರಂತರವಾಗಿ ಹಿನ್ನಡೆಯಾಗುತ್ತಲೇ ಇದೆ. ಪರಿಶಿಷ್ಟ ಸಮುದಾಯದಲ್ಲಿ ಶೋಷಣೆಗೆ ಒಳಗಾಗಿರುವ ಜನಾಂಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು, ಒಳಮೀಸಲಾತಿಯನ್ನು ಜಾರಿಗೆ ತರುವುದು ಅನಿವಾರ್ಯವಾಗಿದ್ದು, ಈ ವಿಚಾರದಲ್ಲಿ ರಾಜ್ಯ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶೀಘ್ರವಾಗಿ ನ್ಯಾ.ನಾಗಮೋಹನ್ ದಾಸ್ ಅವರಿಂದ ವರದಿಯನ್ನು ತರಿಸಿಕೊಳ್ಳುವುದು ಸಹಾ ಸರಕಾರದ ಜವಾಬ್ದಾರಿಯಾಗಿದೆ. ತ್ವರಿತವಾಗಿ ವರದಿ ಜಾರಿಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಹಿಂದ ಪರವಾದ ನಾಯಕರಾಗಿದ್ದರೆ, ಮಾದಿಗ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ವರದಿ ಜಾರಿಗೊಳಿಸುವುದು ವಿಳಂಬವಾದರೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸಮುದಾಯದವರು ನಿಮ್ಮ ಪಕ್ಷದ ವಿರುದ್ಧವಾಗಿ ಮತದಾನ ಮಾಡುವಂತೆ ರಾಜ್ಯಾಧ್ಯಂತ ಕರೆ ನೀಡಲಾಗುತ್ತದೆ ಎಂದರು.
ಅರುಂಧತಿ ಸೇವಾ ಸಮಿತಿಯ ಉಪಾಧ್ಯಕ್ಷ ನರಸಿಂಹಮೂರ್ತಿ, ಡಿ ಎಂ ಕದಿರೆಪ್ಪ, ಬಾನು ಚಂದ್ರ ವಿಜಯಪುರ ಟೌನ್ ಯೂತ್ ಅಧ್ಯಕ್ಷರು ಕಾಂಗ್ರೆಸ್ ,ಮುನಿರಾಜು ಎಂ ಜಾಂಬವ ಯುವಸೇನಾ ತಾಲೂಕು ಅಧ್ಯಕ್ಷರು ದೇವಪ್ಪ ,ಕೃಷ್ಣಪ್ಪ, ಐ.ಬಿ.ದೇವರಾಜ್, ಏನ್ ಶಿವಪ್ಪ ಡಿ ವೆಂಕಟೇಶ್ ಕೋಲ್ಕಾರ್ ಮುನಿಯಪ್ಪ ,ನಾಗರಾಜ್, ಮುಂತಾದವರು ಹಾಜರಿದ್ದರು.