ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಶಾಲೆ ಆವರಣದಲ್ಲಿ ವಿಧ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಗಿರೀಶ್ ರವರು ಉದ್ಘಾಟಿಸಿದರು .

ಸಂಪನ್ಮೂಲ ವ್ಯಕ್ತಿ ಗೋವಿಂದ ರಾಜ್ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ ಪಡೆಯಬೇಕು ತಂದೆ -ತಾಯಿ -ಗುರುಹಿರಿಯರಿಗೆ ಗೌರವ ತೋರಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು,ಪ್ರೌಢ ವ್ಯವಸ್ಥೆ ವಿಧ್ಯಾರ್ಥಿಗಳಿಗೆ ಅಂತಿಮ ಘಟ್ಟ ವಾಗಿದ್ದು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸಬೇಕು ಗುರುಹಿರಿಯರ ಬಗ್ಗೆ ಉತ್ತಮ ಭಾವನೇ ಹೊಂದಬೇಕು ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ಹಾಳುಮಾಡದೇ ಉತ್ತಮ ಶಿಕ್ಷಣ ಪಡೆದು ಯಶಸ್ವಿ ವಿಧ್ಯಾರ್ಥಿಗಳಾಗಿ ಹೊರಹೊಮ್ಮಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ ,ವಲಯ ಮೇಲ್ವಿಚಾರಕ ಈರಣ್ಣ, ಶಾಲಾ ಶಿಕ್ಷಕರಾದ ದೀಕ್ಷಿತ್,ನಾರಾಯಣ್,ಮುನಿರಾಜ್, ಗೋವಿಂದರಾಜು,ಮಂಜಮ್ಮ, ವಲಯದ ಸೇವಾಪ್ರತಿನಿಧಿ ರಿಜ್ವಾನಾ, ವಿ ಎಲ್ ಇ ಶೃತಿ,ಮಂಜುಳ, ಶ್ವೇತಾ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು