” 501 ಕೆ ಜಿ ಹಣ್ಣಿನಿಂದ ಶ್ರೀ ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ”
ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿರುವ ಶ್ರೀ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದ ಶ್ರೀ ಶನಿ ಮಹಾತ್ಮ ದೇವಾಲಯದಲ್ಲಿ ಶ್ರಾವಣ ಮಾಸದ ಎರಡನೇ ಶನಿವಾರ ದಿನದ ವಿಶೇಷ ಪೂಜೆ ಹಾಗೂ 501 ಕೆಜಿ ವಿವಿಧ ಹಣ್ಣುಗಳಿಂದ ಅಲಂಕಾರ .
ಶ್ರೀ ಕ್ಷೇತ್ರದ ಧರ್ಮಕರ್ತರು ಹಾಗೂ ಸಂಸ್ಥಾಪಕರು ,ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಪರಮಪೂಜ್ಯ ವೇದಬ್ರಹ್ಮ ಶ್ರೀ ಶ್ರೀ ಡಾ. ಡಿ.ಎಲ್ ವೀರಬ್ರಹ್ಮಚಾರ್ ಗುರೂಜಿ ರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ನಂತರ ಮಾತನಾಡಿದ ಅವರು ಶ್ರಾವಣ ಮಾಸದಲ್ಲಿ ಪ್ರತಿವಾರವೂ ದೇವರಿಗೆ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತದೆ ಅದೇ ರೀತಿ ಎರಡನೇ ಶ್ರಾವಣ ಶನಿವಾರವಾದ ಇಂದು ವಿಶೇಷವಾಗಿ ವಿವಿಧ ಹಣ್ಣುಗಳಿಂದ ದೇವರಿಗೆ ಅಲಂಕಾರ ಮಾಡಲಾಗಿದೆ ಇದರ ವಿಶೇಷತೆ ಏನೆಂದರೆ ಪ್ರತಿ ಹಣ್ಣನ್ನು 31 ಕೆಜಿಯ ರೀತಿಯಲ್ಲಿ ತಂದು ಅಲಂಕಾರ ಮಾಡಲಾಗಿದೆ ಒಟ್ಟಾರೆಯಾಗಿ 51 ಕೆಜಿ ಹಣ್ಣಿನಿಂದ ಅಲಂಕೃತಗೊಂಡ ಶನಿ ಮಹಾತ್ಮ ಸ್ವಾಮಿಯು ನೋಡುಗರ ಗಮನ ಸೆಳೆಯುತ್ತಿದೆ , ಈ ಪೂಜಾ ಕಾರ್ಯಕ್ರಮಕ್ಕೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಬಂದು ದೇವರ ಮುಂದೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಇಟ್ಟು ದೇವರಲ್ಲಿ ಪ್ರಾರ್ಥಿಸುತ್ತಾರೆ ಹಾಗೂ ಪ್ರತಿ ಅಮಾವಾಸ್ಯೆ ಹುಣ್ಣಿಮೆ ದಿನದಂದು ದೇವಾಲಯದಲ್ಲಿ ಮೃತ್ಯುಂಜಯ ಹೋಮ ಹಾಗೂ ಮಂಗಳವಾರ ಭಾನುವಾರ ಶುಕ್ರವಾರ ರಾಜ್ಯದ ಮೂಲೆ ಮೂಲೆಯಿಂದ ನೂರಾರು ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಆಗಮಿಸಿ, ದೇವರ ಮುಂದೆ ಹರಕೆಗಳನ್ನು ಇಡುವ ಪ್ರತಿತಿಯೂ ಸಹ ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತಾದಿಗಳು ತೀರ್ಥ ಪ್ರಸಾದ ಅನ್ನದಾಸೋಹ ವ್ಯವಸ್ಥೆ ಮಾಡಿಸಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಹಾಗೂ ಪೂಜೆಯ ನೇತೃತ್ವವನ್ನು ರವಿಸುತ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ನೆರವೇರಿಸಿಕೊಟ್ಟರು ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಹಾಜರಿದ್ದರು.