ಕೊಳ್ಳೇಗಾಲ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಬಸವರಾಜು,ಉಪಾಧ್ಯಕ್ಷರಾಗಿ ಸೀಮಾ ಆಯ್ಕೆ

ಚಾಮರಾಜನಗರ: ಕೊಳ್ಳೆಗಾಲದಲ್ಲಿ ತಾಲ್ಲೂಕು ವಕೀಲರ ಸಂಘಕ್ಕೆ ಚುನಾವಣೆ ನಡೆದು ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಸೀಮಾ, ಕಾರ್ಯದರ್ಶಿಯಾಗಿ ಕೆಂಪರಾಜು, ಖಜಾಂಚಿಯಾಗಿ ಅಮೃತ್ ರಾಜ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ವಿನಯ್ ಆಯ್ಕೆಗೊಂಡಿದ್ದಾರೆ.

ಇದೇ ವೇಳೆ ಮಹನಾಯಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಚಾಮರಾಜನಗರ ವಕೀಲರಾದ ಪ್ರಸನ್ನಕುಮಾರ್.ಬಿ ಮಾತನಾಡಿ, ವಕೀಲರು ಹಿತಾಶಕ್ತಿಯನ್ನು ಕಾಪಾಡುವ ಕಳಕಳಿ ಹೊಂದಿರಲಿ ಎಂದು ತಿಳಿಸಿದರು.

ಇದೆ ವೇಳೆ ನೂತನ ಪದಾಧಿಕಾರಿಗಳಿಗೆ ಚಾಮರಾಜನಗರದ ವಕೀಲರಾದ ಪ್ರಸನ್ನ ಕುಮಾರ್.ಬಿ ಮತ್ತು ಕೊಳ್ಳೇಗಾಲದ ವಕೀಲ ಯೋಗೇಶ್ ಅವರು ಮಾಲಾರ್ಪಣೆಯ ಮುಖಾಂತರ ಶುಭಕೋರಿ ಹಾರೈಸಿದರು.

ಈ ಸಂದರ್ಭದಲ್ಲಿ ವಕೀಲರಾದ ಗುಲ್ಜರ್ ಸಿ.ಎನ್, ಹಿರಿಯ ವಕೀಲರಾದ ಸಿ.ಆರ್. ರವಿ, ಸಂತೋಷ್, ಮೋಹನ್, ಸಿಗರಾಜು, ಮಸಣ್ಣನಾಯಕ ಮತ್ತು ಪ್ರವೀಣ್ ಇದ್ದರು

ವರದಿ: ಆರ್ ಉಮೇಶ್ ಮಲಾರಪಾಳ್ಯ