ಸಮಾಜವನ್ನು ಪ್ರೀತಿಸಿ, ಗೌರವಿಸಿ ಆರೋಗ್ಯವಾಗಿಡುವಲ್ಲಿ ಸಾಹಿತ್ಯ ಚಿಂತನೆ ಅಗತ್ಯ

ವಿಜಯಪುರ: ಕನ್ನಡ ಸಾಹಿತ್ಯವು ಬಹಳ ವಿಶಾಲವಾದುದು. ಕನ್ನಡಭಾಷೆಯು ಸಮೃದ್ಧವಾಗಿದ್ದರೂ ಕನ್ನಡದ ನೆಲ, ಜಲ, ಭಾಷೆಯ ಬಗ್ಗೆ ಚಿಂತನೆ ಮಾಡುವ ಮನಸ್ಸನ್ನು ನಾವು ಮಾಡುತ್ತಿಲ್ಲ. ಮನುಷ್ಯರಾಗಬೇಕಾದರೆ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವುದಲ್ಲದೇ ಇಡೀ ಸಮಾಜವನ್ನು ಪ್ರೀತಿಸಿ ಆರೋಗ್ಯವಾಗಿಡಬೇಕಾಗಿರುವುದರಿಂದ ಸಾಹಿತ್ಯ ಚಿಂತನೆಯು ಅತ್ಯಗತ್ಯವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.
ವಿಜಯಪುರ ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯ ಪ್ರಾರ್ಥನಾ ಮಂದಿರದಲ್ಲಿ ಅಖಿಲಕರ್ನಾಟಕ ಮಿತ್ರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದ ದಲಿತ ಮತ್ತು ಬಂಡಾಯ ಸಾಹಿತ್ಯ ಸಮ್ಮೇಳನ, ಬೆಂಗಳುರು ಗ್ರಾಮಾಂತರ ಜಿಲ್ಲಾ ಉತ್ಸವ, ಜಿಲ್ಲಾ ದಲಿತಪರ ಹೋರಾಟಗಾರರ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ತಿಳುವಳಿಕೆಯನ್ನು ಜನರಿಗೆ ಜಾಗೃತಗೊಳಿಸುವಲ್ಲಿ ಸಾಹಿತ್ಯಸಮ್ಮೇಳನಗಳು ಅಗತ್ಯವೆನಿಸಿವೆ. ಕನ್ನಡ ಸಾಹಿತ್ಯದ ಬಗ್ಗೆ ಜನರಲ್ಲಿರುವ ಕೀಳಿರಿಮೆಯನ್ನು ಹೋಗಲಾಡಿಸಬೇಕು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಮಾತನಾಡುವವರನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ಮಾತೃಭಾಷೆ ಕನ್ನಡವಾಗಿ ಸ್ವಾಭಿಮಾನವಿರಬೇಕು. ಬೆಂಗಳೂರಿಗೆ ಜಗತ್ತಿನ ಎಲ್ಲಾ ಮೂಲೆಗಳಿಂದಲೂ ವಲಸೆ ಬರುತ್ತಿದ್ದು ಹೊರಗಿನಿಂದ ಬಂದವರಲ್ಲಿ ಕೆಲವರು ಆರೇಳು ವರ್ಷಗಳಲ್ಲಿ ಕನ್ನಡವನ್ನು ಪ್ರೀತಿಯಿಂದ ಕಲಿತು ಮಾತನಾಡುವ ಗುಣವನ್ನು ಹೊಂದಿದ್ದು, ಇಲ್ಲಿನ ನೀರು, ಗಾಳಿ ಬಳಸುತ್ತಿರುವ ಎಲ್ಲರಿಗೂ ಕನ್ನಡವನ್ನು ಕಲಿಸುವ ಪ್ರೇರಣೆಯನ್ನು ಬೆಳೆಸಬೇಕು. ವ್ಯಾವಹಾರಿಕ ಭಾಷೆಯನ್ನಾಗಿ ಕನ್ನಡವನ್ನು ಬಳಸಿ ಬೆಳೆಸಲು ಎಲ್ಲರೂ ಪಣ ತೊಡಬೇಕು ಎಂದರು.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನನಿರ್ಮಾಣವಾದ ನಂತರ ದೇವನಹಳ್ಳಿ ತಾಲ್ಲೂಕಿನಲ್ಲಿ ಕೇವಲ ಭೂಮಾಫಿಯಾ, ಸರ್ವೆನಂಬರ್‌ಗಳ ಮಂತ್ರ ಮಾತ್ರವೇ ಕಾಣಸಿಗುತ್ತಿದೆ. ಬಸವಣ್ಣ, ಬುದ್ಧ, ಅಂಬೇಡ್ಕರ್‌ರವರ ಜೀವನಾದರ್ಶಗಳನ್ನು ಸ್ಮರಣೆ ಮಾಡಿಕೊಳ್ಳುತ್ತಿಲ್ಲ. ಸಮಾಜಕ್ಕಾಗಿ ಬಾಳುವುದು, ಕೆಳಸ್ತರದಲ್ಲಿರುವ, ಸಾಮಾಜಿಕ ಗೌರವವಿಲ್ಲದವರನ್ನು ಸಮಾನತೆಯಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಲು ಬಸವಾದಿ ಶಿವಶರಣರ ವಚನಗಳು ದಿವ್ಯೌಷಧಿಗಳಾಗಿವೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದಲಿತ ಮತ್ತು ಬಂಡಾಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಹಿಂದಿನಿಂದಲೂ ದಲಿತರ, ಹಿಂದುಳಿದವರ ಶಿಕ್ಷಣ, ಉದ್ಯೋಗ ಸಮಾನತೆಗಾಗಿ ಶ್ರಮಿಸಿದ ಅನೇಕ ಮೇಲ್ವರ್ಗದವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಶಿಕ್ಷಣದ ಮೂಲಕ ಸಮಾನತೆಯನ್ನು ಸೃಷ್ಟಿಸಬೇಕಾಗಿದೆ. ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪರಸ್ಪರ ಚಿಂತನೆ, ಸಹಕಾರ, ಸಹೋದರತ್ವಗುಣಗಳು ಅಗತ್ಯವಾಗಿದೆ ಎಂದರು .

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉತ್ಸವಾಧ್ಯಕ್ಷ ಚಂದನೇಹಳ್ಳಿ ಮುನಿಯಪ್ಪ ಮಾತನಾಡಿ, ವಿಜಯಪುರ ಪಟ್ಟಣವು ವ್ಯಾಪಾರ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಸಾಕಷ್ಟು ಪ್ರಗತಿ ಹೊಂದಿದ್ದು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರವು ಘೋಷಿಸಬೇಕಾಗಿದೆ ಎಂದರು.
ಜಿಲ್ಲಾ ದಲಿತಪರ ಹೋರಾಟಗಾರರ ಉತ್ಸವಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ದೇಶದಲ್ಲಿ ಸಮಾನತೆ, ಭ್ರಾತೃತ್ವದಂತಹ ಮೌಲ್ಯಗಳನ್ನು ಸೃಜಿಸಿ ಉಳಿಸುವಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ರವರ ಕೊಡುಗೆ ಅಆಪರವಾದುದು, ಅವರ ಮೌಲ್ಯಾದರ್ಶಗಳನ್ನು ಎಲ್ಲರೂ ಗೌರವಿಸಿ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ಉಪನ್ಯಾಸಕ ಹೊಸಕೋಟೆ ನಾರಾಯಣಸ್ವಾಮಿ ಅವರು ವಚನಸಾಹಿತ್ಯದಲ್ಲಿ ದಲಿತ ಸಂವೇದನೆ ಕುರಿತು ವಿಷಯ ಮಂಡಿಸಿ, ೧೨ ನೇ ಶತಮಾನದಲ್ಲಿಯೇ ಸ್ತಿçà ಸಮಾನತೆ, ಸಮಾನ ಶಿಕ್ಷಣದಂತಹ ಕಾರ್ಯಗಳನ್ನು ಮಾಡುವಲ್ಲಿ ಅನುಭವಮಂಟಪದ ಪಾತ್ರವು ಮಹತ್ವವಾಗಿತ್ತು. ಕಾಯಕ, ದಾಸೋಹದಂತಹ ಶರಣರ ಮೌಲ್ಯಗಳು ಸದಾ ಅನುಕರಣೀಯವಾದುವು ಎಂದರು.
ಸ್ತ್ರೀ ಸಂವೇದನೆ, ದಲಿತ ಸಂವೇದನೆ ಮೂಲಕ ಅಸಮಾನತೆಯ ವಿರುದ್ಧದ ಹೋರಾಟ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಸಮಾರೋಪ ಭಾಷಣ ಮಾಡಿ, ಅವಮಾನಿತ ಅಕ್ಷರಸ್ಥ ಸಮುದಾಯವು ಸಹಜ, ಅನುಭವಗಳು, ಅವಮಾನ ದೌರ್ಜನ್ಯಗಳನ್ನು ಸ್ಪಷ್ಟವಾಗಿ ದಾಖಲಿಸಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಅಕ್ಷರದ ಮೂಲಕ ಅಭಿವ್ಯಕ್ತಪಡಿಸಿದ ದಲಿತ ಸಾಹಿತ್ಯವು ಸಾಹಿತ್ಯ ಸಿದ್ಧಭಾಷೆ, ನುಡಿಗಟ್ಟು, ವಸ್ತು, ಅನುಭವಗಳನ್ನು ಭಂಜಕಗೊಳಿಸಿತು. ಬಂಡಾಯ ಸಾಹಿತ್ಯವು ಸಾಹಿತ್ಯ ಮತ್ತು ಸಂಘಟನೆ ಎರಡೂ ರೂಪಗಳಲ್ಲಿ ರಾಜ್ಯದಾದ್ಯಂತ ಪ್ರಬಲವಾಗಿ ಬೆಳೆದಿದೆ. ವ್ಯಕ್ತಿವಾದಿ ನೆಲೆಗೆ ವಿರುದ್ಧವಾಗಿ ಸಮಾಜವಾದಿ ನೆಲೆಗಟ್ಟಿನಲ್ಲಿ ನಿರ್ಮಾಣಗೊಂಡ ಸಾಹಿತ್ಯ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮೂಲವಾಗಿ ಜಾತಿ, ಅಸ್ಪೃಶ್ಯತೆ, ಧರ್ಮ, ಪ್ರಭುತ್ವ, ಲಿಂಗಭೇಧಗಳನ್ನು ವರ್ಗಸಂಘರ್ಷಗಳನ್ನು ಪ್ರತಿಭಟುಸಲು ವೇದಿಕೆಯಾಗಿದೆ ಎಂದು ವಿವರಿಸಿದರು.
ಕವಿಗೋಷ್ಟಿ: ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚಂದ್ರಶೇಖರಹಡಪದ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಮ.ಸುರೇಶ್‌ಬಾಬು, ಸ್ವರ್ಣಗೌರಿ ಮಹದೇವ್, ಪಾತಮುತ್ತುಕದಹಳ್ಳಿ ಚಲಪತಿಗೌಡ, ದೊಡ್ಡಬಳ್ಳಾಪುರ ಮಹದೇವ್, ಗುಡಿಬಂಡೆ ಪ್ರೆಸ್ ಸುಬ್ಬರಾಯಪ್ಪ, ಬಾಗೇಪಲ್ಲಿ ಧರ್ಮಪುತ್ರಿ, ದೊಡ್ಡಬಳ್ಳಾಪುರ ಚಿಕ್ಕಣ್ಣ, ಮತ್ತಿತರರು ಸ್ವರಚಿತ ಕವನಗಳನ್ನು ವಾಚಿಸಿದರು.
ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. . ಸಂಘದ ಕಾರ್ಯಾಧ್ಯಕ್ಷ ವಿ.ವಿಶ್ವನಾಥ್, ಕಾರ್ಯದರ್ಶಿ ಆರ್.ಮುನಿರಾಜು, ದೇವನಹಳ್ಳಿ ಪುರಸಭಾ ಮಾಜಿ ಸದಸ್ಯ ಹನುಮಂತಪ್ಪ, ಪುರಸಭಾ ಸದಸ್ಯ ರಾಜಣ್ಣ, ಪಾಶಾ, ದೊಡ್ಡ¨ಳ್ಳಾಪುರ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾ, ಜಾಲಿಗೆ ಮುನಿರಾಜು, ನಿವೃತ್ತ ಶಿಕ್ಷಕ ಕೆ.ಎಚ್.ಚಂದ್ರಶೇಖರ್, ಮುನಿವೆಂಕರಮಣಪ್ಪ, ಜೆ.ಆರ್.ಮುನೀರಣ್ಣ, ರಾಷ್ಟಿಯ ಬಸವದಳದ ಬೇಕರಿ ಶಿವಣ್ಣ, ಮ.ಜಯದೇವ್, ಶ್ರೀ ವೀರಭದ್ರಸ್ವಾಮಿ ಗೋಷ್ಟಿ ಅಕ್ಕನ ಬಳಗದ ಉಪಾಧ್ಯಕ್ಷೆ ಅಂಬಭವಾನಿ, ಮತ್ತಿತರರು ಇದ್ದರು.