ಕನ್ನಮಂಗಲ ಪಂಚಾಯಿತಿ ಯುವ ಕ್ರಿಕೆಟ್ ಕ್ರೀಡಾ ಪಟುಗಳಿಗೆ ವಿಶೇಷ ಪ್ರೋತ್ಸಾಹ ನಾಗೇಶ್
ಬೆಂಗಳೂರು ಗ್ರಾಮಾಂತರ :ದೇವನಹಳ್ಳಿ ತಾಲೂಕಿನ ಕನ್ನಮಂಗಲದಲ್ಲಿ ತಾಯಿ ಭುವನೇಶ್ವರಿ ಹಾಗೂ ಪುನೀತ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕನ್ನಮಂಗಲ ಕ್ರಿಕೆಟ್
ಟೋರ್ನಿಮೆಂಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸಿ ಮಂಜುನಾಥ್ ಚಾಲನೆ ನೀಡಿದರು.
ಕ್ರೀಡೆಗಳು ಯುವಕರಿಗೆ ಸ್ಪೂರ್ತಿದಾಯಕ ಆಟ ವಾಗಿದೆ. ಪಂಚಾಯಿತಿ ವ್ಯಾಪ್ತಿಯ ಯುವಕರು ದುಶ್ಚಟ ಗಳಿಂದ ದೂರ ಉಳಿಯುವ ಉದ್ದೇಶದಿಂದ ಹಾಗೂ ಅವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಬೆಳೆಸಿ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕೂಟದಲ್ಲಿ ಸ್ಪರ್ದಿಸಬೇಕು. ಇಂತಹ ಆಟಗಳಿಗೆ ನಮ್ಮಿಂದ ಅಗತ್ಯ ಸಹಕಾರ ನೀಡಲಾಗುತ್ತದೆ. ಈ
ಒಂದು ಕ್ರೀಡಾಕೂಟವನ್ನು ಪ್ರತಿ ವರ್ಷಗಳಂತೆ ಈ ವರ್ಷವೂ ಹಮ್ಮಿಕೊಂಡು ಬರಲಾ ಗಿದೆ ಎಂದು ಕನ್ನಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗೇಶ್ ಅವರು ತಿಳಿಸಿರುತ್ತಾರೆ.
ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್ ಅವರು ನುರಿತ ಕ್ರಿಕೆಟ್ ಆಟಗಾರರನ್ನು ತಯಾರು ಮಾಡುವ ಉದ್ದೇಶದಿಂದ ಪ್ರತಿ ವರ್ಷ ಕನ್ನಮಂಗಲ ದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಬರಲಾಗುತ್ತಿದೆ.
ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಕೆಸಿ. ಮಂಜು ನಾಥ್, ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬರೀಶ್, ಕೃಷ್ಣಯ್ಯ, ಮುಖಂಡರಾದ ಪೃತ್ವಿ ಪ್ರಾಪರ್ಟಿ ಸ್ ಮಾಲಿಕ ನವರತ್ನ ಅಗ್ರಹಾರ ಶ್ರೀನಿವಾಸ್, ಕೆಎನ್. ಪ್ರಕಾಶ್, ಸಂದೀಪ್, ಮಂಜು ನಾಥ್, ಕೆ.ಪಿ. ಆನಂದ್ ಬಾಬು, ಗೋಪಿಯಣ್ಣ, ಹನುಮಂತ, ಶಿವರಾಜು, ಕುಮಾರ್, ಗಂಗಾಧರ ಸೇರಿದಂತೆ ಕ್ರೀಡಾಪೋಷಕರು ಹಾಗೂ ಊರಿನ ಯುವಕರು ಪಾಲ್ಗೊಂಡಿದ್ದರು.